ರಾಯಚೂರು: ವೀರ ಯೋಧ ಅಭಿನಂದನ್ ಅವರು ಬೇಗ ದೇಶಕ್ಕೆ ಮರಳಲಿ ಎಂದು ಇಡೀ ದೇಶವೇ ಕಾಯುತ್ತಿದ್ದು, ನಗರದಲ್ಲಿ ಮಹಿಳೆಯೊಬ್ಬರು ಉಚಿತ ಟೀ ಮಾರುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.
ಹೌದು. ಬಾನುಬೀ ಮುಸ್ಲಿಂ ಮಹಿಳೆ ನಗರದಲ್ಲಿ ಪುಟ್ಟ ಅಂಗಡಿಯೊಂದನ್ನು ಇಟ್ಟುಕೊಂಡು ಟೀ ಮಾರಾಟ ಮಾಡುತ್ತಿದ್ದಾರೆ. ಇದೀಗ ಅವರು ಭಾರತೀಯ ಸೇನೆಯ ವೀರ ಯೋಧರಿಗೆ ಜಯವಾಗಲಿ ಎಂದು ಸಾರ್ವಜನಿಕರಿಗೆ ಉಚಿತವಾಗಿ ಟೀ ನೀಡುತ್ತಿದ್ದಾರೆ. ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ಆದಾಗಲೂ ದೇಶ ಸೇವೆ ಮೆರೆದಿದ್ದ ಸೈನಿಕರಿಗೆ ಶುಭಾಶಯ ಕೋರಿ ಉಚಿತವಾಗಿ ಟೀ ನೀಡಿದ್ದರು.
ಈ ಬಗ್ಗೆ ಬಾನುಬೀ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ನನ್ನ ಮನಸ್ಸು ಸಂತೋಷವಾಗಿ ನಾನು ಟೀ ಕೊಡುತ್ತಿದ್ದೇನೆ. ನಮ್ಮ ಯೋಧರನ್ನು ಅವರನ್ನು ಬಲಿ ಪಡೆದಾಗ ಬೇಜಾರಾಗಿತ್ತು. ಬಳಿಕ ನಮ್ಮ ಯೋಧರು ಅವರ ದೇಶಕ್ಕೆ ಹೋಗಿ ಹೊಡೆದು ಬಂದಿದ್ದು ಖುಷಿ ಇದೆ. ಹಾಗಾಗಿ ನಾನು ಉಚಿತ ಟೀ ನೀಡುತ್ತಿದ್ದೇನೆ. ಯೋಧ ಅಭಿನಂದನ್ ಅವರಿಗೆ ಏನೂ ಕಷ್ಟ ಕೊಡದೇ, ಏನೂ ಮಾಡದೇ ನಮ್ಮ ದೇಶಕ್ಕೆ ವಾಪಸ್ ಕಳುಹಿಸಬೇಕು” ಎಂದು ಹೇಳಿದ್ದಾರೆ.
ರಾಯಚೂರಿನ ಸಾರ್ವಜನಿಕರು ಕೂಡ ಪಾಕಿಸ್ತಾನದ ವಶದಲ್ಲಿರುವ ಪೈಲೆಟ್ ಅಭಿನಂದನ್ ಸುರಕ್ಷಿತವಾಗಿ ದೇಶಕ್ಕೆ ಮರಳಬೇಕು. ವೀರಯೋಧನಿಗೆ ತೊಂದರೆ ಕೊಡದೆ ಬಿಡಬೇಕು ಎಂದು ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://www.youtube.com/watch?v=Q9sIEe2Zy28
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv