ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರವನ್ನು ಬಿಡಿಸಿದ್ದಕ್ಕೆ ಮುಸ್ಲಿಮ್ ಮಹಿಳೆಯ ಮೇಲೆ ಪತಿ ಸೇರಿದಂತೆ ಐವರು ಸಂಬಂಧಿಕರು ಹಲ್ಲೆ ನಡೆಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ನಗ್ಮಾ ಪರ್ವಿನ್ ಮೇಲೆ ಪತಿ ಪರ್ವೆಜ್ ಖಾನ್ ಸೇರಿದಂತೆ ಐದು ಮಂದಿ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎಂದು ನಗ್ಮಾ ಅವರ ತಂದೆ ಶಂಶೀರ್ ಖಾನ್ ದೂರು ನೀಡಿದ್ದಾರೆ.
Advertisement
ಮೋದಿ ಮತ್ತು ಆದಿತ್ಯನಾಥ್ ಅವರ ಚಿತ್ರವನ್ನು ಬಿಡಿಸಿದ್ದಕ್ಕೆ, ಮಗಳ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಪರ್ವೆಜ್ ಖಾನ್ ದೂರು ನೀಡಿದ್ದಾರೆ. ಭಾನುವಾರ 6 ಮಂದಿಯ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಸಿಕಂದರ್‍ಪುರ ಎಸ್‍ಪಿ ಅನಿಲ್ ಕುಮಾರ್ ತಿಳಿಸಿದ್ದಾರೆ.
Advertisement
ನಗ್ಮಾ ಅವರು ಕಳೆದ ವರ್ಷ ಸಿಕಂದರ್‍ಪುರದ ಬಸರಿಕಪುರ್ ಗ್ರಾಮದ ಪರ್ವೆಜ್ ಅವರನ್ನು ವಿವಾಹವಾಗಿದ್ದರು.