ಚಾಮರಾಜನಗರ: ಕರ್ನಾಟಕದ ಎಲ್ಲಾ ದೇವಸ್ಥಾನಗಳಲ್ಲೂ ಮುಸ್ಲಿಮರ ವ್ಯಾಪಾರ ಬಹಿಷ್ಕಾರ ಮಾಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿಕೆ ನೀಡಿದರು.
ಚಾಮರಾಜನಗರದಲ್ಲಿ (Chamarajanagar) ಆಜಾದ್ ಹಿಂದೂ ಸೇನೆ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಹಿಂದೂ ದೇವಾಲಯಗಳ ನೂರು ಮೀಟರ್ ಅಂತರದಲ್ಲಿ ಹಿಂದೂಯೇತರರಿಗೆ ಪ್ರವೇಶವಿಲ್ಲ. ವ್ಯಾಪಾರ ಮಾಡಬಾರದು ಎಂಬ ನಿಯಮ ಇದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದರು. ಇದನ್ನೂ ಓದಿ: ಶಾರೀಕ್ ಅಲ್ಲ ಘಜನಿಯಿಂದ ಟಿಪ್ಪುವರೆಗಿನ ಎಲ್ಲರೂ ದೇವಸ್ಥಾನದ ಮೇಲೆ ದಾಳಿ ಮಾಡ್ಕೊಂಡೇ ಬಂದಿದ್ದಾರೆ: ಮುತಾಲಿಕ್
Advertisement
Advertisement
ಕುಕ್ಕೆ ಸುಬ್ರಮಣ್ಯದಲ್ಲಿ ಬೇರೆ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂಬ ಬ್ಯಾನರ್ ಅಳವಡಿಸಿರುವುದನ್ನು ಸ್ವಾಗತಿಸಿದ ಅವರು, ಇದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ತಿಳಿಸಿದರು.
Advertisement
ನಮ್ಮ ದೇಶದಲ್ಲೇ ಹುಟ್ಟಿ ನಮ್ಮದೇ ಅನ್ನ ತಿಂದು ನಮ್ಮ ದೇವಸ್ಥಾನದಲ್ಲೇ ಬಾಂಬ್ ಇಟ್ಟು ಉಡಾಯಿಸುವ ದುಷ್ಟರ ವಿರುದ್ಧ ನಮ್ಮ ಹೋರಾಟ ನಡೆಯುತ್ತದೆ. ಇಲ್ಲಿಯವರೆಗೆ ಹಿಂದೂ ಸಮಾಜ ಶಾಂತಿಯಿಂದ ವರ್ತಿಸಿದೆ. ಅದನ್ನು ದುರುಪಯೋಗ ಮಾಡಿಕೊಳ್ಳುವ ಕಿಡಿಗೇಡಿ ಮುಸ್ಲಿಂ ಮಾನಸಿಕತೆ ವಿರುದ್ಧವೇ ಈ ವ್ಯಾಪಾರ ಬಹಿಷ್ಕಾರವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮಂಡ್ಯದಲ್ಲಿ ಅಂಬಿ, ಅಪ್ಪು ಅರಮನೆ – ಅಭಿಮಾನಿಯಿಂದ ನೆಚ್ಚಿನ ನಟರಿಗೆ ಗುಡಿ
Advertisement
ಯಾರೋ ನಾಲ್ಕು ಜನ ಮಾಡಿದ ಕೃತ್ಯಕ್ಕೆ ಇಡೀ ಮುಸ್ಲಿಂ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ಮುಸ್ಲಿಂ ಮುಖಂಡರು, ಮುಲ್ಲಾ, ಮೌಲ್ವಿಗಳು ಅರ್ಥ ಮಾಡಿಕೊಳ್ಳಬೇಕು. ನಾವು ಈ ದೇಶದ ಅನ್ನ ತಿನ್ನುತಿದ್ದೇವೆ. ಈ ದೇಶದ ವಿರುದ್ಧವೇ ತಿರುಗಿಬೀಳುವ ಮಾನಸಿಕತೆ ಸರಿ ಅಲ್ಲ ಎಂದು ಅರಿಯಬೇಕು ಎಂದು ಹೇಳಿದರು.