ದಿ ಕೇರಳ ಸ್ಟೋರಿ ನಂತರ ಅಂಥದ್ದೇ ಕಥೆ ಹೋಲುವಂತಹ ಮತ್ತೊಂದು ಸಿನಿಮಾ ಬಾಲಿವುಡ್ ನಲ್ಲಿ ರೆಡಿಯಾಗಿತ್ತು. ಸೆನ್ಸಾರ್ ಮಂಡಳಿಯು (ಚಲನಚಿತ್ರ ಪ್ರಮಾಣೀಕೃತ ಮಂಡಳಿ) ಈ ಸಿನಿಮಾದ ಟ್ರೈಲರ್ ಗೆ ಸರ್ಟಿಫಿಕೇಟ್ ನೀಡಲು ನಿರಾಕರಿಸುತ್ತಿದೆ ಎಂದು ಚಿತ್ರತಂಡ ಆರೋಪ ಮಾಡಿತ್ತು. ಚಿತ್ರಕ್ಕೆ ಸರ್ಟಿಫಿಕೇಟ್ ನೀಡಿದರೂ ಟ್ರೈಲರ್ ಗೆ ನೀಡುತ್ತಿಲ್ಲ ಎಂದು ಚಿತ್ರತಂಡ ಕೇಳಿಕೊಂಡಿತ್ತು. ಅದಕ್ಕೀಗ ಸೆನ್ಸಾರ್ ಮಂಡಳಿ ಪತ್ರಿಕ್ರಿಯೆ ನೀಡಿದೆ.
Advertisement
ಈಗಾಗಲೇ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಿದ್ದೇವೆ. ಟ್ರೈಲರ್ ಗೂ ನೀಡುತ್ತಿದ್ದೇವೆ. ಆದರೆ ಕೆಲವೊಂದು ಪ್ರಕ್ರಿಯೆಯನ್ನು ಚಿತ್ರತಂಡ ನಿಭಾಯಿಸಬೇಕಾಗಿದೆ. ಅದಕ್ಕಾಗಿ ಅವರು ನೋಟಿಸ್ ಕೂಡ ನೀಡಿದ್ದೇವೆ. ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಸೆನ್ಸಾರ್ ಮಂಡಳಿಯು ಯಾವುದೇ ಸಿನಿಮಾ ನಿರ್ಮಾಪಕನಿಗೆ ತೊಂದರೆ ಕೊಡುವುದಿಲ್ಲ. ಈ ರೀತಿ ಸುಳ್ಳು ಸುದ್ದಿಯನ್ನು ಬಿತ್ತರಿಸುವುದು ತಪ್ಪು ಎಂದು ಸಿ.ಬಿ.ಎಫ್.ಸಿ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಹಿನ್ನೆಲೆ ಏನು?
Advertisement
ಒಟ್ಟು ಹತ್ತು ಭಾಷೆಗಳಲ್ಲಿ ರೆಡಿ ಆಗಿರುವ ಬಾಲಿವುಡ್ ನ ’72 ಹೂರೇನ್’ (72 Hooraine) ಸಿನಿಮಾದ ಟ್ರೈಲರ್ ಗೆ ಪ್ರಮಾಣ ಪತ್ರ ನೀಡಲು ಸೆನ್ಸಾರ್ (ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕೃತ ಮಂಡಳಿ) ಮಂಡಳಿಯು ನಿರಾಕರಿಸಿದೆ ಎಂದು ಚಿತ್ರದ ನಿರ್ದೇಶಕ ಸಂಜಯ್ ಪುರಾಣ್ ಸಿಂಗ್ ಚೌಹಾನ್ (Sanjay Puran Singh Chauhan) ತಿಳಿಸಿದ್ದರು. ಪೂರ್ತಿ ಸಿನಿಮಾಗೆ ಸೆನ್ಸಾರ್ ಮಂಡಳಿಯ ಸರ್ಟಿಫಿಕೇಟ್ ನೀಡಿದೆ. ಆದರೆ, ಟ್ರೈಲರ್ (Trailer) ಗೆ ಮಾತ್ರ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದರು.
ಮುಸ್ಲಿಂ ಯುವಕ-ಯುವತಿಯರನ್ನು ಭಯೋತ್ಪಾದನೆಗೆ ತಳ್ಳುವ ಹುನ್ನಾರದ ಕುರಿತಾದ ಸಿನಿಮಾ ಇದಾಗಿದ್ದು, ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನವಾಗಿ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆದಿದೆ. ಹಲವು ಕಡೆ ಪ್ರದರ್ಶನವಾಗಿರುವ ಚಿತ್ರವನ್ನು ಮುಂದಿನ ತಿಂಗಳು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಅದಕ್ಕಾಗಿ ಟ್ರೈಲರ್ ಸಿದ್ಧವಾಗಿದೆ. ಈ ಟ್ರೈಲರ್ ಗೆ ಸೆನ್ಸಾರ್ ಪ್ರಮಾಣ ಪತ್ರ ನಿರಾಕರಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇದನ್ನೂ ಓದಿ:ರಾಘವ್ ಲಾರೆನ್ಸ್-ಕಂಗನಾ ನಟನೆಯ ‘ಚಂದ್ರಮುಖಿ 2’ ಎಂಟ್ರಿಗೆ ಮುಹೂರ್ತ ಫಿಕ್ಸ್
ಟ್ರೈಲರ್ ನಲ್ಲಿ ಮೃತದೇಹದ ಕಾಲುಗಳನ್ನು ತೋರಿಸಲಾಗಿದೆ. ಕಾಲುಗಳ ದೃಶ್ಯವನ್ನು ತೆಗೆದುಹಾಕುವಂತೆ ಸೆನ್ಸಾರ್ (Censor) ಮಂಡಳಿ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ‘ನೀವು ಸತ್ತ ನಂತರ ನಿಮಗೆ ಸ್ವರ್ಗದಲ್ಲಿ 72 ಯುವತಿಯರು ಸಿಗುತ್ತಾರೆ’ ಎನ್ನುವ ಮೂಲಕ ಭಯೋತ್ಪಾದಕ ಸಂಘಟನೆಗಳು ಯುವಕರನ್ನು ಬ್ರೈನ್ ವಾಶ್ ಮಾಡುತ್ತವೆ ಎನ್ನುವ ಮಾತಿದೆ. ಇದನ್ನೇ ಇಟ್ಟುಕೊಂಡು 72 ಹೂರೇನ್ ಸಿನಿಮಾ ಮಾಡಲಾಗಿದೆ.
ಟ್ರೈಲರ್ ಗೆ ಸೆನ್ಸಾರ್ ಪತ್ರ ಸಿಗದೇ ಇರುವ ಕಾರಣದಿಂದಾಗಿ ತಾವು ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪ್ರಸೂನ್ ಜೋಶಿ ಅವರನ್ನು ಭೇಟಿ ಮಾಡುವ ಕುರಿತು ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರನ್ನು ಚಿತ್ರತಂಡ ಭೇಟಿ ಮಾಡಿ, ಚಿತ್ರದ ಬಗ್ಗೆ ಮನವರಿಕೆ ಮಾಡಿಕೊಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು.
Web Stories