ಉಡುಪಿ: ಎಬಿವಿಪಿ ಪ್ರತಿಭಟನೆಯಲ್ಲಿ ಇಬ್ಬರು ಮುಸಲ್ಮಾನ್ ವಿದ್ಯಾರ್ಥಿಗಳು ಭಾಗಿಯಾಗಿದ್ದರಿಂದ ಸಿಎಫ್‍ಐ ಪ್ರತಿ ಸವಾಲ್ ಕೈಗೊಂಡು ಹಿಜಬ್ ವಿವಾದ ಹುಟ್ಟಿಸಿದೆ ಎಂಬ ಆರೋಪಗಳು ಈಗ ಕೇಳಿಬರುತ್ತಿವೆ.
ಕಳೆದ ಅಕ್ಟೋಬರ್‌ನಲ್ಲಿ ಮಣಿಪಾಲ ವಿದ್ಯಾರ್ಥಿ ಅತ್ಯಾಚಾರ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಮುಸ್ಲಿಂ ವಿದ್ಯಾರ್ಥಿನಿಯರು ಎಬಿವಿಪಿ ಪ್ರತಿಭಟನೆಯಲ್ಲಿ ತೊಡಗಿದ್ದಕ್ಕೆ ಸಿಎಫ್‍ಐ ಪ್ರತಿ ಸವಾಲ್ ಎಸೆದಿತ್ತು. ಹಿಜಾಬ್ ಅವಕಾಶ ಕೇಳುವಂತೆ ಸಿಎಫ್‍ಐ ಸಂಘಟನೆಗೆ ಪ್ರೇರೇಪಿಸಿದ್ದರಿಂದ ವಿದ್ಯಾರ್ಥಿನಿಯರು ಪ್ರತಿಭಟನೆಗೆ ಇಳಿದಿದ್ದಾರೆ ಎಂಬ ಮಾತು ಈಗ ಕೇಳಿ ಬಂದಿದೆ.
ಈ ಬಗ್ಗೆ ಮಾತನಾಡಿದ ಆಲಿಯಾ ಅಸಾದಿ ಅವರು, ಹಿಜಬ್ ಮತ್ತು ಕೇಸರಿ ವಿಚಾರದಲ್ಲಿ ಪೊಲಿಟಿಕಲ್ ಗೇಮ್ ನಡೆಯುತ್ತಿದೆ. ವಿದ್ಯಾರ್ಥಿಗಳ ವಿಚಾರಕ್ಕೆ ರಾಜಕೀಯ ಎಂಟ್ರಿಯಾಗಿದ್ದು ಯಾಕೆ? ಎಬಿವಿಪಿ ಪ್ರತಿಭಟನೆಗೆ ನಾವು ಕಾಲೇಜಿನಿಂದ ಎಲ್ಲರೂ ಹೋಗಿದ್ದೆವು. ಹಿಜಬ್ ಹಾಕಿ ನಾವು ಪ್ರತಿಭಟನೆಗೆ ಹೋಗಿದ್ದೆವು. ಆಗ ನಮಗೆ ಹೇಗೆ ಹಿಜಬ್ ಅವಕಾಶ ಕೊಟ್ಟಿದ್ದರು ಜೊತೆಗೆ ಎಬಿವಿಪಿ ಪ್ರತಿಭಟನೆ ಎಂದು ನಮಗೆ ಯಾರು ಹೇಳಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾವು ಮುಸ್ಲಿಂ ಹೆಣ್ಣು ಮಕ್ಕಳ ಪರ: ಮೋದಿ
ನಾನು 17 ವಯಸ್ಸಿನ ವಿದ್ಯಾರ್ಥಿನಿ. ನನಗೆ ಮೆಂಟಲಿ ಟಾರ್ಚರ್ ಆಗುತ್ತಿದೆ. ಹಿಂದೂ ಮತ್ತು ಮುಸ್ಲಿಮರ ನಡುವೆ ವಿಭಾಗ ಆಗುತ್ತಿದೆ. ಹಿಂದಿನಿಂದಲೂ ಕೇಸರಿ ಶಾಲನ್ನು ಹಾಕುತ್ತಿದ್ದಾರಾ ಎಂದು ಪ್ರಶ್ನಿಸಿದ ಅವರು, ನಮಗೆ ಶಿಕ್ಷಣದಷ್ಟೇ ನಮ್ಮ ಧರ್ಮ ಕೂಡ ಅಷ್ಟೇ ಮುಖ್ಯ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ಅಮಾಯಕ ಮಕ್ಕಳ ಜೀವನದ ಜೊತೆ ಚೆಲ್ಲಾಟ ಆಡುತ್ತಿವೆ: ಹೆಚ್‍ಡಿಕೆ
ನನಗೆ ನನ್ನ ಜೀವನದಲ್ಲಿ ಒಂದು ಗುರಿ ಇದೆ. ನಾನು ಕೂಡ ಈ ದೇಶಕ್ಕೆ ಏನಾದರೂ ಮಾಡಬೇಕು ಎಂದು ಕನಸು ಕಟ್ಟಿದ್ದೇನೆ. ನನಗೆ ಬಹಳ ಹಿಂದೂ ಧರ್ಮದ ಗೆಳತಿಯರಿದ್ದಾರೆ. ಹಿಜಬ್‍ಗೆ ಹಿಂದೂ ಹಾಗೂ ಮುಸಲ್ಮಾನ ಗೆಳತಿಯರು ಸಹಾಯ ಮಾಡದ್ದರು ಎಂದರು.