ಚಾಮರಾಜನಗರ: ಇಲ್ಲಿನ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು (Muslim Student) ಬುರ್ಕಾ ಧರಿಸಿ ಮಹದೇಶ್ವರನ ಭಕ್ತಿಗೀತೆ (Mahadeshwara Devotional Song) ಹಾಡುವ ಮೂಲಕ ಸಾಮರಸ್ಯ ಬೆಸೆಯುವ ಕೆಲಸ ಮಾಡಿದ್ದಾರೆ.
ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಭಾರತೀಯ ಪರಿವರ್ತನ ಸಂಘದಿಂದ ಆಯೋಜನೆ ಮಾಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರದಲ್ಲಿ ವಿದ್ಯಾರ್ಥಿನಿ ಪ್ರಾರ್ಥನಾ ಗೀತೆ ಹಾಡಿ ಸಭಿಕರ ಮನಗೆದ್ದಿದ್ದಾರೆ. ಇದನ್ನೂ ಓದಿ: ಜಿಲ್ಲಾ ಕೇಂದ್ರಗಳಲ್ಲಿ ಉದ್ಯಮಿಯಾಗು-ಉದ್ಯೋಗ ನೀಡು ಕಾರ್ಯಾಗಾರ: ಸಚಿವ ನಿರಾಣಿ
Advertisement
Advertisement
ಚಾಮರಾಜನಗರ (Chamarajanagar) ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಉಮ್ಮೆ ಬಸೀರಾ, `ಸೋಜುಗಾದ ಸೂಜು ಮಲ್ಲಿಗೆ.. ಮಾದೇವಾ ನಿಮ್ಮ ಮಂಡೆ ಮ್ಯಾಗೆ ದುಂಡು ಮಲ್ಲಿಗೆ’ ಭಕ್ತಿ ಗೀತೆ ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿನಿ ಹಾಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಮನಸೋತು ಶಿಳ್ಳೆ-ಚಪ್ಪಾಳೆಯ ಮಳೆಗರೆದಿದ್ದಾರೆ. ಇದನ್ನೂ ಓದಿ: ಪ್ರಧಾನಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ – 33 ಲಕ್ಷ ಚಂದಾದಾರರಿದ್ದ 3 ಯೂಟ್ಯೂಬ್ ಚಾನೆಲ್ ಪತ್ತೆ
Advertisement
Advertisement
ಈ ಹಿಂದೆ ಸರಿಗಮಪ ಆಡಿಷನ್‌ನಲ್ಲಿ ಮುಸ್ಲಿಂ ಮಹಿಳಾ ಗಾಯಕಿ ಸುಹಾನಾ ಸೈಯದ್ (Suhana Syed) ಅವರು, `ಮುಕುಂದ ಮುರಾರಿ’ ಸಿನಿಮಾದ `ನೀನೆ ರಾಮ, ನೀನೆ ಶಾಮ, ನೀನೆ ಅಲ್ಲಾ, ನೀನೆ ಏಸು’ ಗೀತೆ ಹಾಡುವ ಮೂಲಕ ರಾಜ್ಯಾದ್ಯಂತ ಜನರ ಮನ ಗೆದ್ದಿದ್ದರು.