ವಾರಣಾಸಿ: ಜ್ಞಾನವಾಪಿ ಪ್ರಕರಣದಲ್ಲಿ ಅಂಜುಮನ್ ಇಂತೇಜಾಮಿಯಾ ಮಸೀದಿ ಪರ ವಾದ ಮಂಡಿಸುತ್ತಿದ್ದ ಹಿರಿಯ ವಕೀಲ ಅಭಯನಾಥ್ ಯಾದವ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
Advertisement
ಭಾನುವಾರ ತಡರಾತ್ರಿ ಎದೆನೋವು ಕಾಣಿಸಿಕೊಂಡ ಬಳಿಕ ಅಭಯನಾಥ್ ಯಾದವ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವಾರಣಾಸಿಯ ಪಾಂಡೆಪುರ ನಿವಾಸಿಯಾದ ಯಾದವ್ ಅವರು 35 ವರ್ಷಗಳಿಂದ ವಕೀಲ ವೃತ್ತಿಯಲ್ಲಿದ್ದು, ಪತ್ನಿ, ಮಗ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಭಾನುವಾರ ರಾತ್ರಿ 10:30ರ ಸುಮಾರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಯಾದವ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಅವರು ಬದುಕಲಿಲ್ಲ ಎಂದು ಅವರ ಕುಟುಂಬ ತಿಳಿಸಿದೆ. ಇದನ್ನೂ ಓದಿ: ದ.ಕನ್ನಡದಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆ ಇದ್ದು, ಹೆಚ್ಚಿಸಬೇಕು: ಡಿಜಿಪಿ ಪ್ರವೀಣ್ ಸೂದ್
Advertisement
Advertisement
ಯಾದವ್ ಕಳೆದ ತಿಂಗಳು ಜ್ಞಾನವಾಪಿ ಪ್ರಕರಣದಲ್ಲಿ ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಮಸೀದಿ ಪರ ವಾದವನ್ನು ಮಂಡಿಸಿದ್ದರು. ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ವಕೀಲರ ತಂಡದ ನೇತೃತ್ವ ವಹಿಸಿದ್ದರು. ಅವರ ಸಾವಿಗೆ ಮಸೀದಿ ಸಮಿತಿಯ ಜಂಟಿ ಕಾರ್ಯದರ್ಶಿ ಎಸ್.ಎಂ.ಯಾಸಿನ್ ಸಂತಾಪ ಸೂಚಿಸಿದ್ದಾರೆ.
Advertisement
ಮಸೀದಿ ಆವರಣದಲ್ಲಿ ಪತ್ತೆಯಾದ ಶಿವಲಿಂಗ ಸೇರಿದಂತೆ ಹಿಂದೂ ಧಾರ್ಮಿಕ ಕುರುಹುಗಳಿಗೆ ಪೂಜೆ ಸಲ್ಲಿಸಲು ಅನುಮತಿ ಕೋರಿ ಐದು ಮಂದಿ ಮಹಿಳೆಯರು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಯಾದವ್ ಮಸೀದಿಯ ಪರ ವಾದ ಮಂಡಿಸಿದ್ದರು. ಇದನ್ನೂ ಓದಿ: ಅಂತರರಾಷ್ಟ್ರೀಯ ಒಪ್ಪಿಗೆ ಸಿಗಬೇಕಾದರೆ ಮಾನವ ಹಕ್ಕು ಗೌರವಿಸಿ: ತಾಲಿಬಾನ್‍ಗೆ UN ಖಡಕ್ ಎಚ್ಚರಿಕೆ