ಯಾದಗಿರಿ: ಮೋದಿ ಮತ್ತೊಮ್ಮೆ ಪ್ರಧಾನಿ ಆದ್ರೆ ಮುಸ್ಲಿಂ ಮೀಸಲಾತಿ (Muslim Reservation) ತೆಗೆಯುತ್ತೇವೆ ಎಂದು ಬಿಜೆಪಿ (BJP) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ.
ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರು ಮತ್ತು ಹಿಂದುಳಿದವರಿಗೆ ಕಾಂಗ್ರೆಸ್ (Congress) ಭಾರೀ ಮೋಸ ಮಾಡಿದೆ. ಸಂವಿಧಾನದಲ್ಲಿ ಕೇವಲ ಎಸ್‍ಸಿ, ಎಸ್‍ಟಿ, ಅಲ್ಪಸಂಖ್ಯಾತರು, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಲಾಗಿದೆ. ಮುಸ್ಲಿಂ ಧರ್ಮಕ್ಕೆ ಮೀಸಲಾತಿ ಕೊಡಲು ಬರುವುದಿಲ್ಲ. ಮೂರನೇ ಬಾರಿ ಪ್ರಧಾನಿಯಾದ ಬಳಿಕ ಮೊದಲು ಮುಸ್ಲಿಂ ಮೀಸಲಾತಿ ತೆಗೆದು ಹಾಕುತ್ತೇವೆ. ಅದನ್ನು ಎಸ್‍ಸಿ, ಎಸ್‍ಟಿ ಹಾಗೂ ಹಿಂದುಳಿದ ಜನಾಂಗದವರಿಗೆ ಹಂಚಿಕೆ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸಂಕಷ್ಟ ಎದುರಾದ ಬೆನ್ನಲ್ಲೇ ಮಂಗಳೂರಿಗೆ ಬಂದು ದೇವರಿಗೆ ಮೊರೆ ಹೋದ ಶಿಲ್ಪಾ ಶೆಟ್ಟಿ
ಮೊದಲ ಹಂತದಲ್ಲಿ ಮತದಾನ ನಡೆದ 14 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ವಾತಾವರಣವಿದೆ. ಮೇ 7ರಂದು ನಡೆಯಲಿರುವ ಉಳಿದ 14 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ಎರಡನೇ ಹಂತದಲ್ಲಿಯೂ ದಿನದಿಂದ ದಿನಕ್ಕೆ ಬಿಜೆಪಿ, ಮೋದಿ ಅಲೆ ಏಳುತ್ತಿದೆ. ಇದರಿಂದ ಉಳಿದ 14 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 55% ಆಸ್ತಿ ಸರ್ಕಾರದ ವಶಕ್ಕೆ:
ರಾಹುಲ್ ಗಾಂಧಿ ಸಲಹೆಗಾರ ಸ್ಯಾಮ್ ಪಿತ್ರೋಡಾ, ಚುನಾವಣಾ ಪ್ರಣಾಳಿಕೆಯಲ್ಲಿ ದೇಶದ ಎಲ್ಲಾ ಜನರ ಆಸ್ತಿ ಸರ್ವೇ ಮಾಡ್ತೀವಿ ಎಂದು ಹೇಳಿದ್ದಾರೆ. ಜನರ ಆಸ್ತಿಯನ್ನು ಸರ್ವೆ ಮಾಡುವುದಾಗಿ ಹೇಳಿದ್ದಾರೆ. ಬಳಿಕ ಆಸ್ತಿಯಲ್ಲಿ 55% ಸರ್ಕಾರ ವಾಪಸ್ ಪಡೆಯಲಿದೆ. ಕೇವಲ 45% ಮಾತ್ರ ಅವರ ಮಕ್ಕಳು, ಮೊಮ್ಮಕ್ಕಳಿಗೆ ಕೊಡಬೇಕು ಎಂಬ ಕಾನೂನು ತರಲು ಹೊರಟಿದ್ದಾರೆ. ತಂದೆಯ ಆಸ್ತಿ ಮಕ್ಕಳಿಗೆ ಹೋಗಬೇಕು ಎಂಬ ನಮ್ಮ ಸಂಪ್ರದಾಯ ಮುರಿಯಲು ಹೊರಟಿದ್ದಾರೆ. ನಮ್ಮ ಸಂಪ್ರದಾಯ ಮುರಿದು ಮುಸಲ್ಮಾನರಿಗೆ ಆಸ್ತಿ ಕೊಡಲು ಸರ್ಕಾರ ಹೊರಟಿದೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ‘ಕೈ’ ನಾಯಕರಿಗೆ ಸೇರಿದ ಕಾರಿನಲ್ಲಿ 2 ಕೋಟಿಗೂ ಅಧಿಕ ಹಣ ಪತ್ತೆ – ಕಾರು ಸಮೇತ ಹಣ ಸೀಜ್