ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಂದು ಮುಸ್ಲಿಂ ಧರ್ಮ ಗುರುಗಳ (Muslim Religious Leader) ಸಮಾವೇಶ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸಮಾವೇಶದ ಉದ್ಘಾಟನೆ ನೆರವೇರಿಸಲಿದ್ದಾರೆ.
ರಾಜ್ಯದಿಂದ ಮಾತ್ರವಲ್ಲದೇ ಮಹಾರಾಷ್ಟ, ತಮಿಳನಾಡು, ತೆಲಂಗಾಣ (Telangana), ಆಂಧ್ರಪ್ರದೇಶ ಭಾಗಗಳಿಂದ 200ಕ್ಕೂ ಅಧಿಕ ಮುಸ್ಲಿಂ ಧರ್ಮಗುರುಗಳು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿಗಳು ಸಮಾವೇಶ ಉದ್ಘಾಟನೆ ನೆರವೇರಿಸಲಿದ್ದು, ಸ್ಥಳೀಯ ಸಚಿವರು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಲೋಕ ಸಮರದಲ್ಲಿ ಬಿಜೆಪಿ-ಜೆಡಿಎಸ್ ಒಂದಾಗಿ ಕಾಂಗ್ರೆಸ್ಸನ್ನು ಧೂಳಿಪಟ ಮಾಡ್ತೇವೆ: ವಿಜಯೇಂದ್ರ
ಹುಬ್ಬಳ್ಳಿಯ ಹೊರವಲಯದ ಭಾಷಾಪೀರ್ ದರ್ಗಾ ಬಳಿ ಸಮಾವೇಶ ನಡೆಯಲಿದೆ. ದೇಶದಲ್ಲಿ ಧರ್ಮದ ವಿಚಾರದಲ್ಲಿ ಹೆಚ್ಚುತ್ತಿರುವ ವಿವಾದಗಳು, ಜನಾಂಗಿಯ ವೈಷ್ಯಮ್ಯದ ಕುರಿತಾಗಿ ಚರ್ಚೆಗಳು ನಡೆಯಲಿದ್ದು, ಶಾಂತಿ-ಸೌಹಾರ್ದತೆ ನೆಲೆಸುವ ನಿರ್ಣಯಗಳನ್ನು ಸಮಾವೇಶದಲ್ಲಿ ಕೈಗೊಳ್ಳಲಾಗುತ್ತದೆ ಎಂದು ಸಮಾವೇಶ ಆಯೋಜಕರು ತಿಳಿಸಿದ್ದಾರೆ.
ಸದ್ಯ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ (Belagavi Session) ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ವಿಫಲವಾಗಿಲ್ಲ, ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ – ಅಧಿವೇಶನಕ್ಕೂ ಮುನ್ನ ಸಿಎಂ ರಿಯಾಕ್ಷನ್