ಲಕ್ನೋ: ಇತ್ತೀಚೆಗೆ ಕೋಮು ಉದ್ವಿಗ್ನತೆ ಮತ್ತು ತೋಳಗಳ ದಾಳಿಯಿಂದ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಬಹರಿಚ್ ಜಿಲ್ಲೆಯಿಂದ ಕೋಮು ಸಾಮರಸ್ಯದ ಹೃದಯಸ್ಪರ್ಶಿ ಕಥೆಯೊಂದು ಹೊರಹೊಮ್ಮಿದೆ.
ಧರ್ಮನಿಷ್ಠ ಮುಸ್ಲಿಂ ಆಗಿರುವ ಮೊಹಮ್ಮದ್ ಅಲಿ, ಹಿಂದೂ ದೇವಾಲಯವನ್ನು ನಿರ್ವಹಿಸುವ ಟ್ರಸ್ಟ್‌ನ ಉಸ್ತುವಾರಿ ಮತ್ತು ಅಧ್ಯಕ್ಷರಾಗಿ 18 ವರ್ಷಗಳ ಸುದೀರ್ಘ ಸೇವೆಯ ಮೂಲಕ ಏಕತೆಯ ಸಂಕೇತವಾಗಿದ್ದಾರೆ.
- Advertisement -
ಬಹರಿಚ್ ಜಿಲ್ಲಾ ಕೇಂದ್ರದಿಂದ 27 ಕಿಲೋಮೀಟರ್ ದೂರದಲ್ಲಿರುವ ಜೈತಾಪುರ ಬಜಾರ್‌ನಲ್ಲಿ, ಅಲಿ ವೃದ್ಧ್ ಮಾತೇಶ್ವರಿ ಮಾತಾ ಘುರ್ದೇವಿ ದೇವಾಲಯದ ಮೇಲ್ವಿಚಾರಣೆಯನ್ನು ಮೊಹಮ್ಮದ್ ಅಲಿ ಮಾಡುತ್ತಿದ್ದಾರೆ. ಈ ಸ್ಥಳದಲ್ಲಿ ಮುಸ್ಲಿಮರೂ ಪೂಜೆ ಸಲ್ಲಿಸುತ್ತಾರೆ.
- Advertisement -
ರೋಜಾ ಮತ್ತು ನಮಾಜ್‌ನಂತಹ ಇಸ್ಲಾಮಿಕ್ ಸಂಪ್ರದಾಯಗಳನ್ನು ಪಾಲಿಸುತ್ತಾ 58 ವರ್ಷದ ಅಲಿ, ಘುರ್ದೇವಿ ದೇವತೆ ಮತ್ತು ಹನುಮಂತನ ಆರಾಧನೆಗೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾರೆ.
- Advertisement -
‘ನಾನು ಏಳು ವರ್ಷದವನಿದ್ದಾಗ, ನನಗೆ ಲ್ಯುಕೋಡರ್ಮಾ ಬಂದಿತ್ತು. ನನ್ನ ಕಣ್ಣುಗಳು ಬಿಳಿಯಾಗಿದ್ದವು. ನನಗೆ ಕೊಡಿಸಿದ್ದ ಯಾವ ಚಿಕಿತ್ಸೆಯೂ ಫಲಕಾರಿಯಾಗಲಿಲ್ಲ. ಆಗ ನನ್ನ ತಾಯಿ ನನ್ನನ್ನು ಘುರ್ದೇವಿ ದೇವಸ್ಥಾನಕ್ಕೆ ಕರೆದೊಯ್ದರು. ಅದಾದ ನಂತರ ನನ್ನ ಕಾಯಿಲೆ ವಾಸವಾಯಿತು. 2007 ರಲ್ಲಿ ದೇವಿಯು ನನ್ನ ಕನಸಿನಲ್ಲಿ ಬಂದು ದೇವಾಲಯವನ್ನು ನೋಡಿಕೊಳ್ಳುವಂತೆ ಹೇಳಿದರು. ಅಲ್ಲಿಂದ ನನ್ನ ಸೇವೆ ಪ್ರಾರಂಭಿಸಿದೆ’ ಎಂದು ಮೊಹಮ್ಮದ್ ಅಲಿ ತಿಳಿಸಿದ್ದಾರೆ.
- Advertisement -
ಅಲಿ ಅವರ ನಾಯಕತ್ವದಲ್ಲಿ ದೇವಾಲಯವು ಅಭಿವೃದ್ಧಿ ಹೊಂದಿದೆ. ಸುಗ್ಗಿಯ ಋತುಗಳಲ್ಲಿ ಧಾನ್ಯ ಸಂಗ್ರಹಣೆ ಹಾಗೂ ನಿಧಿ ಸಂಗ್ರಹಣೆಯಂತಹ ಕಾರ್ಯಗಳಿಂದ ದೇವಾಲಯಕ್ಕೆ ಗಮನಾರ್ಹ ಸಂಪನ್ಮೂಲ ಹರಿದುಬಂದಿದೆ. ಈ ವರ್ಷವಷ್ಟೇ ದೇವಾಲಯದ ಅಭಿವೃದ್ಧಿಗಾಗಿ 2.7 ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದೆ.
ಸಾರ್ವಜನಿಕ ಕೊಡುಗೆಗಳು ಮತ್ತು ಸರ್ಕಾರದ ಬೆಂಬಲವು ದೇವಾಲಯದ ನವೀಕರಣಕ್ಕೆ ಸಹಾಯ ಮಾಡಿದೆ. ದೇವಾಲಯ ನಿರ್ಮಾಣ ಮತ್ತು ನಿರ್ವಹಣೆಗಾಗಿ 30ರಿಂದ 40 ಲಕ್ಷಕ್ಕೂ ಹೆಚ್ಚು ಹಣ ಬಳಕೆಯಾಗಿದೆ.