ಕೊಪ್ಪಳ: ಮುಸ್ಲಿಂ ಸಮುದಾಯದಕ್ಕೆ ಸೇರಿದ ವ್ಯಕ್ತಿಯೊಬ್ಬರು ವೀಕಲಚೇತನರಾಗಿದ್ದು, ಪಂಕ್ಚರ್ ಹಾಕಿ ಜೀವನ ಮಾಡುತ್ತಿದ್ದಾರೆ. ಆದರೆ ಇದೀಗ ಅವರು ಮಾಡುವ ಕಾರ್ಯಕ್ಕೆ ಇಡೀ ಆ ಗ್ರಾಮದಲ್ಲಿ ಭಾವೈಕ್ಯ ಮೂಡಿದೆ. ಹಿದೂ ದೇವಾಲಯ ಕಟ್ಟಿಸಿರೋ ಅವರು ದೇವಸ್ಥಾನದಲ್ಲಿ ನಿತ್ಯ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯದ ಸಂದೇಶ ಸಾರಿದ್ದಾರೆ.
Advertisement
ಹೌದು. ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಭಾವೈಕ್ಯ ಸಂದೇಶ ಸಾರುತ್ತಿರೋ ಅಬ್ಬುಸಾಹೇಬ ಹಿಂದೂ ದೇವಾಲಯ (Hindu Temple) – ದರ್ಗಾ (Darga) ಕಟ್ಟಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಮೂಲತ ಕೊಪ್ಪಳ (Koppala) ಜಿಲ್ಲೆಯ ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದ ಇವರು ಹುಟ್ಟಿನಿಂದ ವೀಕಲ ಚೇತನರಾಗಿದ್ದಾರೆ. ಹುಟ್ಟಿನಿಂದಲೇ ಹಿಂದೂ-ಮಸ್ಲಿಂ-ಕ್ರೈಸ್ತರೆಲ್ಲರೂ ಒಂದೇ ಎನ್ನುವ ಅಂಶವನ್ನು ಮೈಗೂಡಿಸಿಕೊಂಡು ಬೆಳೆದ ಇವರು, ಜೀವನ ಸಾಗಿಸುವ ಸಲುವಾಗಿ ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಪಂಕ್ಚರ್ ಶಾಪ್ ಇಟ್ಟುಕೊಂಡು ಜೀವನ ಮಾಡುತ್ತಾರೆ. ಅದೊಂದು ದಿನ ಇವರ ಕನಸಿನಲ್ಲಿ ಅಂಬಾದೇವಿ ಬರ್ತಾಳಂತೆ. ಇದರಿಂದ ಮತ್ತಷ್ಟು ಭಾವೈಕ್ಯ ಮೂಡಿಸುವ ನಿಟ್ಟಿನಲ್ಲಿ ಅಬ್ಬುಸಾಹೇಬ ಅವರು ಹೊನ್ನೂರಲಿ ದರ್ಗಾ ಹಾಗೂ ಬಂಗಾಳಿ ಅಂಬಾದೇವಿ ದೇವಸ್ಥಾನ ಕಟ್ಟಿಸಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.
Advertisement
Advertisement
ಕಳೆದ ಎರಡು ವರ್ಷದ ಹಿಂದೆ ಈ ಗ್ರಾಮದಲ್ಲಿ ಅಂಬಾದೇವಿ ಭಾವೈಕ್ಯತಾ ಆಶ್ರಯ ನಿರ್ಮಾಣವಾಗಿದೆ. ಕಳೆದ ಐದು ತಿಂಗಳ ಹಿಂದೆ ಆಶ್ರಮದ ಭಕ್ತರೆಲ್ಲರೂ 15 ದಿನಗಳಲ್ಲಿಯೇ ಭವ್ಯವಾದ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. ಯಾವುದೇ ಅಪೇಕ್ಷೆ ಇಲ್ಲದೆ ಪೂಜೆ ಮಾಡುತ್ತಿರುವ ಅಬ್ಬುಸಾಹೇಬ ಅವರು ದೇಶದಲ್ಲಿ ಮತ್ತಷ್ಟು ಭಾವೈಕ್ಯತೆ ಹೆಚ್ಚಾಗಬೇಕು ಎಂದು ಹೇಳುತ್ತಾರೆ. ಇದನ್ನೂ ಓದಿ: World Athletics Championships- ಚಿನ್ನದ ಪದಕಕ್ಕೆ ಮುತ್ತಿಟ್ಟು ಹೊಸ ದಾಖಲೆ ಬರೆದ ನೀರಜ್ ಚೋಪ್ರಾ
Advertisement
ಒಟ್ಟಿನಲ್ಲಿ ಜಾತಿ-ಧರ್ಮ ಅಂತಾ ಜಗಳವಾಡುವ ಜನರ ಮಧ್ಯೆ ಅಬ್ಬುಸಾಹೇಬ ಅವರ ಭಾವೈಕ್ಯತಾ ಕಾರ್ಯ ಎಲ್ಲರೂ ಮೆಚ್ಚುವಂತಾಗಿದೆ. ಇವರ ಕಾರ್ಯ ಇನ್ನಷ್ಟೂ ಜನರಿಗೆ ಮಾದರಿಯಾಗಲಿ ಅನ್ನೋದೇ ಎಲ್ಲರ ಆಶಯವಾಗಿದೆ.
Web Stories