ತಿರುವನಂತರಪುರಂ: ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಆರ್‌ಎಸ್‍ಎಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿ ಭಾಷಣ ಮಾಡಿದ್ದ ಐಯುಎಂಎಲ್ ಹಿರಿಯ ಮುಖಂಡರಾದ ಮಾಜಿ ಶಾಸಕ ಕೆ.ಎನ್.ಎ. ಖಾದರ್ ಅವರಿಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಎಚ್ಚರಿಕೆ ನೀಡಿದೆ.
ದಾರ್ಶನಿಕ ಮತ್ತು ಖ್ಯಾತ ವಾಗ್ಮಿಯಾದ ಖಾದರ್ ಅವರನ್ನು ಕೆಲವು ದಿನಗಳ ಹಿಂದೆ ಕೋಝಿಕ್ಕೋಡ್‍ನ ಕೇಸರಿ ಭವನದಲ್ಲಿ ಸ್ನೇಹಬೋಧಿ ಸಾಂಸ್ಕೃತಿಕ ಸಭೆಯಲ್ಲಿ ಗೌರವಿಸಲಾಗಿತ್ತು. ಇದು ಆರ್‌ಎಸ್‍ಎಸ್ ಪ್ರಾಯೋಜಿತ ಕಾರ್ಯಕ್ರಮವಾಗಿ. ಅಲ್ಲಿ ಮಾತನಾಡಿದ್ದ ಖಾದರ್ ಅವರು, ಗುರುವಾಯೂರು ಶ್ರೀಕೃಷ್ಣ ದೇವಸ್ಥಾನವನ್ನು ಪ್ರವೇಶಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು.
Advertisement
Advertisement
ಉತ್ತರ ಭಾರತದ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಆದರೆ ಗುರುವಾಯೂರ್‌ನಲ್ಲಿರುವ ಶ್ರೀಕೃಷ್ಣ ದೇವಾಲಯವನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದು ಅವರು ಆರ್‌ಎಸ್‍ಎಸ್ ಕಾರ್ಯಕ್ರಮದಲ್ಲಿ ತಿಳಿಸಿದ್ದರು. ಇದನ್ನೂ ಓದಿ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೀರೆ, ಚಪ್ಪಲಿ ಹರಾಜು?
Advertisement
ಹೀಗಾಗಿ ಪಕ್ಷದ ನಾಯಕತ್ವವು ಖಾದರ್ ಅವರಿಂದ ವಿವರಣೆ ಕೇಳಿತ್ತು. ಖಾದರ್ ನೀಡಿದ ವಿವರಣೆಯ ಬಗ್ಗೆ ಚರ್ಚಿಸಿದ ಪಕ್ಷದ ಹೈಪವರ್ ಕಮಿಟಿಯು ಪಕ್ಷದ ಸಂಪ್ರದಾಯವನ್ನು ಕಡೆಗಣಿಸಿರುವ ಬಗ್ಗೆ ಎಚ್ಚರಿಕೆ ನೀಡಲು ನಿರ್ಧರಿಸಿದೆ ಎಂದು ಲೀಗ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಕಬ್ಬಿನ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಶಾಲಾ ಬಾಲಕಿ ಸಾವು
Advertisement
ಖಾದರ್ ಅವರು ಹೆಚ್ಚು ಜಾಗರೂಕರಾಗಿರಬೇಕು. ಅವರು ಮಾಡುವ ಭಾಷಣಗಳು ಮತ್ತು ಸಾರ್ವಜನಿಕ ಹೇಳಿಕೆಗಳು ಪಕ್ಷದ ನೀತಿಗಳು ಮತ್ತು ಆಚರಣೆಗಳಿಗೆ ಅನುಗುಣವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಪಕ್ಷವು ಅವರಿಗೆ ಎಚ್ಚರಿಕೆ ನೀಡಿದೆ. ವೆಂಗಾರ ಮಾಜಿ ಶಾಸಕ ಖಾದರ್ 2021ರ ವಿಧಾನಸಭೆ ಚುನಾವಣೆಯಲ್ಲಿ ಗುರುವಾಯೂರಿನಿಂದ ಸೋತಿದ್ದರು.