ಬೆಂಗಳೂರು: ಹೈಕೋರ್ಟ್ ಹಿಜಬ್‌ಗೆ ಸಂಬಂಧ ಪಟ್ಟಂತೆ ನೀಡಿರುವ ತೀರ್ಪು ಮುಸ್ಲಿಂ ಬಾಂಧವರಿಗೆ ನೋವು ತಂದಿದೆ. ಈ ನೋವನ್ನು ನಾವು ನಾಳೆ ತೋರಿಸಲಿದ್ದೇವೆ. ಮುಸ್ಲಿಂ ಸಂಘಟನೆಗಳು ಗುರುವಾರ ಬಂದ್‌ಗೆ ಕರೆ ಕೊಟ್ಟಿದೆ ಎಂದು ಮುಸ್ಲಿಂ ಮುಖಂಡ ಮೌಲಾನಾ ಮುಸ್ಕೂದ್ ಇಬ್ರಾನ್ ರಶೀದ್ ಹೇಳಿಕೆ ನೀಡಿದ್ದಾರೆ.
ಕಮಿಷನರ್ ಕಮಲ್ ಪಂತ್ ಜೊತೆ ನಡೆಸಿದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಶೀದ್ ನಾಳೆ ಯಾರು ಕೂಡಾ ಮನೆಯಿಂದ ಆಚೆ ಬರಬಾರದು. ಮೈದಾನಗಳಲ್ಲಿ ಸೇರಬಾರದು. ರ‍್ಯಾಲಿಗಳನ್ನು ನಡೆಸಬಾರದು. ಮುಸ್ಲಿಮ್ ವಿದ್ಯಾರ್ಥಿಗಳು ಶಾಲೆಗೆ ತೆರಳಬಾರದು. ಬದಲಿಗೆ ಮನೆಯಲ್ಲಿಯೇ ಇರಬೇಕು. ಯಾವುದೇ ಪ್ರತಿಭಟನೆ ನಡೆಸದೇ ಶಾಂತಿಯುತವಾಗಿ ನಮ್ಮ ನೋವನ್ನು ತೋರಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಅತ್ಯಗತ್ಯವಲ್ಲ ವಾದ ಬೇಸರ ತಂದಿದೆ: ಉಡುಪಿ ಮುಸ್ಲಿಮ್ ಒಕ್ಕೂಟ
ಈ ವೇಳೆ ಮಾತನಾಡಿದ ಕಮಿಷನರ್ ಕಮಲ್ ಪಂತ್ ಗುರುವಾರ ಮುಸ್ಲಿಂ ಮುಖಂಡರು ಬಂದ್‌ಗೆ ಕರೆ ಕೊಟ್ಟಿದ್ದಾರೆ. ಹಿಜಬ್ ಬಗೆಗಿನ ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಇಂದು ನಾವು ಮುಸ್ಲಿಂ ಮುಖಂಡರ ಜೊತೆ ಸಭೆ ಮಾಡಿದ್ದೇವೆ. ಗುರುವಾರ ಹೊರಗಡೆ ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ. ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದು ಹಾಗೂ ಕಚೇರಿಗೆ ತೆರಳುವವರನ್ನು ನಾವು ತಡೆಯುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ಬುರ್ಕಾ ಹಾಕಬೇಕು, ನಮಾಜ್ ಮಾಡಬೇಕು, ಮುಸ್ಲಿಂ ಸಂಸ್ಕೃತಿ ಪಾಲಿಸಬೇಕೆಂದು ಒತ್ತಾಯಿಸುತ್ತಿದ್ದ: ಪತ್ನಿ ನೇರ ಆರೋಪ
ಬಂದ್ ಅನ್ನು ಶಾಂತಿಯುತವಾಗಿ ನಡೆಸುತ್ತಿರುವುದಾದರೂ ಸಾಕಷ್ಟು ಬಂದೋಬಸ್ತ್ ಮಾಡಲಾಗಿದೆ. ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೀಟ್‌ನಲ್ಲಿ ಇರುತ್ತಾರೆ. ಕೆಲವೆಡೆ ರೂಟ್ ಮಾರ್ಚ್ ಮಾಡಲಾಗುವುದು. 25 ಕೆಎಸ್‌ಆರ್‌ಪಿ ಹಾಗೂ 35 ಸಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಕಮಲ್ ಪಂತ್ ತಿಳಿಸಿದರು.