ತಿರುವನಂತಪುರಂ: ಲೇಖಕ, ಖ್ಯಾತ ಕಾದಂಬರಿಕಾರರೂ ಆಗಿರುವ ಸಲ್ಮಾನ್ ರಶ್ದಿ ಅವರ ಮೇಲಿನ ದಾಳಿಯ ಬಗ್ಗೆ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದು, ಈ ಕೃತ್ಯಗಳಿಗೆ ಇಸ್ಲಾಮಿಕ್ ಹಣೆಪಟ್ಟಿ ಕಟ್ಟುವುದು ಸೂಕ್ತವಲ್ಲ. ಏಕೆಂದರೆ ಮುಸ್ಲಿಂ ಬಹುತೇಕ ಕಾನೂನುಗಳು ಕುರಾನ್ ಆಧರಿತವಾಗಿಲ್ಲ, ವಿರುದ್ಧವಾಗಿಯೇ ಇವೆ ಎಂದು ಹೇಳಿದ್ದಾರೆ.
Advertisement
ಖ್ಯಾತ ಕಾದಂಬರಿಕಾರ ಸಲ್ಮಾನ್ ರಶ್ದಿ ಮೇಲಿನ ಮಾರಣಾಂತಿಕ ದಾಳಿ ಕುರಾನ್‌ನ ಬೋಧನೆಗಳಿಗೆ ವಿರುದ್ಧವಾಗಿದೆ. ಆದರೆ ಇಂತಹ ದಾಳಿಗಳಿಗೆ ಅವಕಾಶ ನೀಡುವ ಕಾನೂನುಗಳಿಗೆ ಮುಸ್ಲಿಂ ಕಾನೂನಿನ ಹಣೆಪಟ್ಟಿ ಕಟ್ಟಲಾಗಿದೆ. ದಿಯೋಬಂದ್ ಹಾಗೂ ನದ್ವಾತುಲ್ ಉಲೇಮಾದಂತಹ ಪ್ರಮುಖ ಮದರಸಾಗಳಲ್ಲಿನ ಪಠ್ಯ ಕ್ರಮದ ಭಾಗವಾಗಿವೆ ಎಂದು ಆರೀಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ಇದನ್ನೂ ಓದಿ: ರಶ್ದಿ ಆರೋಗ್ಯದಲ್ಲಿ ಚೇತರಿಕೆ – ವೆಂಟಿಲೇಟರ್‌ನಿಂದ ಬಿಡುಗಡೆ
Advertisement
Advertisement
ಇಸ್ಲಾಂ ಹೆಸರಿನಲ್ಲಿ ಏನೇ ನಡೆದರೂ ಅದಕ್ಕೆ ಪುಸ್ತಕದ ಅನುಮೋದನೆ ಇರಬೇಕು. ಆದ್ರೆ ಈಗ ಮುಸ್ಲಿಂ ಸಾಮ್ರಾಜ್ಯದ ಅವಧಿಯಲ್ಲಿ ಬಂದಂತಹ ಕಾನೂನಿಗೆ ಅನುಗುಣವಾಗಿ ನಡೆಯುತ್ತಿದೆ. ಇವೆಲ್ಲಾ ದೇವ ವಿಶ್ವಾಸಿಗಳಿಗೆ ವ್ಯರ್ಥ ಹಾಗೂ ನೋಯಿಸುವ ಅಂಶಗಳಿಂದ ದೂರ ಇರುವಂತೆ ಹೇಳುವ ಕುರಾನ್ ಬೋಧನೆಗಳಿಗೆ ವಿರುದ್ಧವಾಗಿಯೇ ಇದೆ. ಇಂತಹ ಕೃತ್ಯಗಳನ್ನು ಇಸ್ಲಾಮಿಕ್ ಎಂದು ಹೇಳುವುದು ಸೂಕ್ತವಲ್ಲ ಎಂಬುದು ನನ್ನ ಭಾವನೆ ಎಂದಿದ್ದಾರೆ. ಇದನ್ನೂ ಓದಿ: ಟಾಯ್ಲೆಟ್‍ನಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಕೂಡಿ ಹಾಕಿ ಕೆಜಿಗಟ್ಟಲೆ ಚಿನ್ನ ಹೊತ್ತೊಯ್ದರು
Advertisement
ರಶ್ದಿ ಮೇಲಿನ ದಾಳಿಯಂತಹ ಕೃತ್ಯಗಳಿಗೆ ಅನುಮೋದನೆ ನೀಡುವ ಕಾನೂನನ್ನು ಮುಸ್ಲಿಂ ಕಾನೂನು ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಸಮಸ್ಯೆ ಏನಾಗಿದೆ ಎಂದರೆ ಮುಸ್ಲಿಂ ಕಾನೂನು ಎಂದು ಹೇಳುತ್ತಿರುವುದು ಬಹುತೇಕ ಕುರಾನ್ ಆಧರಿತವಾಗಿಲ್ಲ. ಅಂದಿನ ಸರ್ಕಾರಗಳಲ್ಲಿದ್ದ ವ್ಯಕ್ತಿಗಳು ನಿರ್ಮಿಸಿರುವಂತಹ ನಿಬಂಧನೆಗಳಾಗಿವೆ ಎಂದು ರಾಜ್ಯಪಾಲರು ಸ್ಪಷ್ಟನೆ ನೀಡಿದ್ದಾರೆ.