ಫೇಸ್‍ಬುಕ್ ಪ್ರೀತಿ – ಹಿಂದೂ ಯುವಕನನ್ನು ವರಿಸಿದ ಮುಸ್ಲಿಂ ಯುವತಿ

Public TV
0 Min Read
muslim girl marry hindu men in mangaluru

ಮಂಗಳೂರು: ಬೆಳ್ತಂಗಡಿಯಲ್ಲಿ (Belthangady) ನಾಪತ್ತೆಯಾಗಿದ್ದ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ಮದುವೆಯಾಗಿ (Marriage) ಪತ್ತೆಯಾಗಿದ್ದಾಳೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಪಟ್ರಮೆ ಗ್ರಾಮದ ಸುಹಾನ (19) ಕಂಪ್ಯೂಟರ್ ಕ್ಲಾಸ್‍ಗೆ ಹೋಗಿದ್ದವಳು ನಾಪತ್ತೆ ಆಗಿದ್ದಳು. ಬಳಿಕ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈಗ ಹಿಂದೂ ಯುವಕ ಹರೀಶ್ ಗೌಡ (24) ಎಂಬಾತನ ಜೊತೆ ಮದುವೆಯಾಗಿ ಪತ್ತೆಯಾಗಿದ್ದಾಳೆ.

ಇಬ್ಬರಿಗೂ ಫೇಸ್‍ಬುಕ್‍ನಲ್ಲಿ ಪರಿಚಯವಾಗಿ ಪ್ರೀತಿಯಾಗಿತ್ತು. ಇದೀಗ ಜೋಡಿ ಬೆಳ್ತಂಗಡಿಯ ಕೊತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.

ಮದುವೆಯಾಗಿ ಧರ್ಮಸ್ಥಳ (Dharmasthala) ಪೊಲೀಸ್ ಠಾಣೆಗೆ ಆಗಮಿಸಿ, ಸ್ವ ಇಚ್ಛೆಯಿಂದ ಹೋಗಿ ಮದುವೆ ಆಗಿರುವುದಾಗಿ ಯುವತಿ ಹೇಳಿಕೆ ನೀಡಿದ್ದಾಳೆ.

Share This Article