ನೆಲಮಂಗಲ: ನೆಲಮಂಗಲದ ಕಣೇಗೌಡನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಇಸ್ಲಾಂಪುರದಲ್ಲಿ ನೂತನವಾಗಿ ಮುಸ್ಲಿಂ ಧಾರ್ಮಿಕ ಈದ್ಗಾ ಉದ್ಘಾಟನೆ ಮಾಡಲಾಯಿತು.
Advertisement
ಈಗಾಗಲೇ ಇಸ್ಲಾಂಪುರದಲ್ಲಿ ಹಳೆಯ ಈದ್ಗಾವಿದ್ದು ವರ್ಷಕ್ಕೊಮ್ಮೆ ಬರುವಂತಹ ಪವಿತ್ರವಾದ ರಂಜಾನ್ ಹಾಗೂ ಬಕ್ರೀದ್ ಹಬ್ಬಗಳಿಗೆ ಈದ್ಗಾಗಳಲೇ ನಮಾಜ್ ಮಾಡುವುದು ಸಂಪ್ರದಾಯ. ಹಳೆಯ ಈದ್ಗಾದ ಜಾಗ ತುಂಬಾ ಚಿಕ್ಕವಾಗಿದ್ದು, ಹೆಚ್ಚು ಜನ ನಮಾಜ್ ಸಲ್ಲಿಸಲು ಸಾಧ್ಯವಾಗದ ಕಾರಣ ನೂತನವಾಗಿ ಮತ್ತೊಂದು ಈದ್ಗಾದ ನಿರ್ಮಾಣ ಮಾಡಲಾಯಿತು. ಇದನ್ನೂ ಓದಿ: ತ್ವಚೆ ಡಲ್ ಆಗಿದ್ಯ ಮೊಟ್ಟೆಯ ಫೇಸ್ ಪ್ಯಾಕ್ ಬಳಸಿ
Advertisement
Advertisement
ಮಾಧ್ಯಮದ ಜೊತೆ ಮಾತನಾಡಿದ ನೆಲಮಂಗಲ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ, ಗ್ರಾಮದ ಮುಸಲ್ಮಾನರು ಹಬ್ಬದ ನಮಾಜ್ ಮಾಡಲು ಅವರ ಅನುಕೂಲಕ್ಕಾಗಿ ಈದ್ಗಾದ ಉದ್ಘಾಟನೆಯನ್ನು ಮಾಡಿದ್ದೇವೆ. ನಾನು ಆಶ್ವಾಸನೆ ಕೊಡುವಂತಹ ರಾಜಕಾರಣಿಯಲ್ಲ ಇಸ್ಲಾಂಪುರ ಮುಖ್ಯ ರಸ್ತೆಯ ಕಾಮಗಾರಿ ಆದೇಶವನ್ನು ಕಾಯುತ್ತಿದ್ದೇನೆ. ಮುಂದಿನ ದಿನಗಳಲ್ಲಿ ರಸ್ತೆಯ ಕಾಮಗಾರಿ ಆದೇಶ ಬಂದ ಮೇಲೆ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದರು. ಇದನ್ನೂ ಓದಿ: ಕ್ಯಾನ್ಸರ್ ರೋಗ 4ನೇ ಹಂತ ತಲುಪಿದಾಗ ಏನಾಗುತ್ತೋ ಹಾಗೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗ್ಬೇಕು: ವಿನಯ್ ಗುರೂಜಿ
Advertisement
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಂಜನಮೂರ್ತಿ, ಪಿಳ್ಳಪ್ಪ ಮಾಜಿ ಪುರಸಭೆ ಅಧ್ಯಕ್ಷ, ಮೋಹದೀನ್ ಹಾಲಿ, ಕಣೇ ಗೌಡನಹಳ್ಳಿ ಪಂಚಾಯಿತಿ ಅಧ್ಯಕ್ಷ, ಕಲೀಂ ಉಲ್ಲಾ ಕಾಂಗ್ರೆಸ್ ಮುಖಂಡರು, ರಜಾಕ್ ಸಾಹೇಬರು ಮಾಜಿ ಸದಸ್ಯರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.