ಹುಬ್ಬಳ್ಳಿ: ಹುಬ್ಬಳ್ಳಿಯ (Hubballi) ನೆಹರೂ ಮೈದಾನದಲ್ಲಿ ನೂರಾರು ಕಾರ್ಯಕರ್ತರಿಂದ RSS ಪಥ ಸಂಚಲನ ನಡೆಯಿತು. ಈ ಪಥಸಂಚಲನ ಹಲವಾರು ವಿಶೇಷತೆಗಳಿಗೂ ಸಹ ಸಾಕ್ಷಿಯಾಯಿತು.
ಕಾರ್ಯಕ್ರಮ ಮೊದಲ ವಿಶೇಷತೆ ಎಂದರೆ ಪಥ ಸಂಚಲನದಲ್ಲಿ ಹಿಂದೂ-ಮುಸ್ಲಿಂ ಒಂದಾಗಿ ಹೆಡ್ಗೆವಾರ್ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಹೆಡ್ಗೆವಾರ್ ಭಾವಚಿತ್ರ ಹೊತ್ತು ಪಥ ಸಂಚಲನ ಹೊರಟ ಟ್ರ್ಯಾಕ್ಟರ್‌ಗೆ ಮುಸ್ಲಿಂ ಮುಖಂಡರು ಪುಷ್ಪಾರ್ಪಣೆ ಮಾಡಿದರು. ಇದನ್ನೂ ಓದಿ: ಶೇ.10ಕ್ಕೆ ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗರ ಸಂಘ ಒತ್ತಾಯ
ಮುಸ್ಲಿಂ ಮುಖಂಡರು ಹೂ ಹಾಕುವ ವೇಳೆ ಭಾರತ್ ಮಾತಾ ಕೀ ಜೈ ಎಂದು ಕೂಗಿದ RSS ಕಾರ್ಯಕರ್ತರು ದೇಶದ ಐಕ್ಯತೆಯನ್ನು ಸಾರಿದರು. ಇನ್ನೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಗಣವೇಶ ತೊಟ್ಟು ಪಥ ಸಂಚಲನದಲ್ಲಿ ಭಾಗಿಯಾಗಿದ್ದು ಮತ್ತೊಂದು ವಿಶೇಷವಾಗಿತ್ತು. ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಕೊಡುಗೆ ನೆನೆಯದಿದ್ದರೆ ನರಕಕ್ಕೆ ಹೋಗ್ತೀರಾ: ಬಿ.ಎಲ್. ಸಂತೋಷ್