ಗಾಂಧೀನಗರ: ಹಿಂದೂ ಸಂಘಟನೆಯೊಂದರ ನಾಯಕನನ್ನು ಕೊಲ್ಲಲು ಸಂಚು ರೂಪಿಸಿದ್ದ ಆರೋಪದ ಮೇಲೆ ಸೂರತ್ (Surat) ಪೊಲೀಸರು ಮುಸ್ಲಿಂ ಧರ್ಮಗುರುವನ್ನು (Muslim Cleric) (ಮೌಲ್ವಿ) ಬಂಧಿಸಿದ್ದಾರೆ.
ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 153 (A) (ಧರ್ಮ, ಜನಾಂಗದ ಮೇಲೆ ವಿನಾಕಾರಣ ನಿಂದನೆ ಅಥವಾ ದಾಳಿಯಲ್ಲಿ ತೊಡಗುವುದು), 467, 468 ಮತ್ತು 471 (ದಾಖಲೆಗಳು ಅಥವಾ ಎಲೆಕ್ಟ್ರಾನಿಕ್ ದಾಖಲೆಗಳ ನಕಲಿಗೆ ಸಂಬಂಧಿಸಿದೆ) ಹಾಗೂ ಸೆಕ್ಷನ್ 120 ( ಬಿ) ಕ್ರಿಮಿನಲ್ ಪಿತೂರಿ ಅಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: Mumbai Attack | ಆರ್‌ಎಸ್‌ಎಸ್‌ಗೆ ಹತ್ತಿರ ಇರೋ ಪೊಲೀಸರಿಂದ ಹೇಮಂತ್ ಕರ್ಕರೆ ಹತ್ಯೆ: ಮಹಾರಾಷ್ಟ್ರ ಕಾಂಗ್ರೆಸ್ ನಾಯಕ
Advertisement
Advertisement
ಮೌಲ್ವಿಗೆ 27 ವಯಸ್ಸು. ಮದರಸಾದಲ್ಲಿ ಪಾಠ ಮಾಡುತ್ತಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಆರೋಪಿಯು ಪಾಕಿಸ್ತಾನದ ಡೊಂಗರ್ ಎಂಬ ವ್ಯಕ್ತಿ ಮತ್ತು ನೇಪಾಳದ ಸೆಹನಾಜ್ ಎಂಬ ವ್ಯಕ್ತಿಯೊಂದಿಗೆ ಕಳೆದ 2 ವರ್ಷಗಳಿಂದ ಸಂಪರ್ಕ ಹೊಂದಿದ್ದ. ಭಾರತದಲ್ಲಿ ಹಿಂದೂ ಸಂಘಟನೆಗಳು ಪ್ರವಾದಿಯನ್ನು ನಿರಂತರವಾಗಿ ಅವಮಾನಿಸುತ್ತಿವೆ ಎಂದು ಪಾಕಿಸ್ತಾನ ಮತ್ತು ನೇಪಾಳದವರು, ಮೌಲ್ವಿಗೆ ಪ್ರಚೋದನೆ ನೀಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಹಿಂದೂ ಸಂಘಟನೆ ನಾಯಕನ ಹತ್ಯೆಗೆ ಆರೋಪಿಯು ಪಾಕಿಸ್ತಾನ ಮತ್ತು ನೇಪಾಳದವರೊಂದಿಗೆ 1 ಕೋಟಿ ‘ಸುಪಾರಿ’ (ಕೊಲ್ಲಲು ಒಪ್ಪಂದ) ನೀಡಲು ಮತ್ತು ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಸಂಚು ರೂಪಿಸಿದ್ದ ಎಂದು ಸೂರತ್‌ನ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗೆಹ್ಲೋಟ್ ಹೇಳಿದ್ದಾರೆ. ಇದನ್ನೂ ಓದಿ: General Elections2024: ನೆಚ್ಚಿನ ಅಭ್ಯರ್ಥಿಗಳ ಮೇಲೆ ಲಕ್ಷ ಲಕ್ಷ ಬೆಟ್ಟಿಂಗ್ ಕಟ್ಟಿದ ವಕೀಲರು!
Advertisement
ವ್ಯಕ್ತಿಯೊಬ್ಬನ ಚಲನವಲನ ದೇಶ ವಿರೋಧಿಯಾಗಿದೆ. ಹೀಗಾಗಿ ಆತನ ಮೇಲೆ ನಿಗಾ ಇರಿಸಲಾಗಿದೆ ಎಂದು ಸೂರತ್ ಸಿಟಿ ಕ್ರೈಂ ಬ್ರಾಂಚ್‌ಗೆ ಮಾಹಿತಿ ಲಭಿಸಿತ್ತು. ಸೂರತ್‌ನ ಚೌಕ್ ಬಜಾರ್ ಪ್ರದೇಶದಲ್ಲಿ ಆತನನ್ನು ವಶಕ್ಕೆ ಪಡೆದು ಮೊಬೈಲ್ ಪರಿಶೀಲಿಸಲಾಗಿದೆ. ಆರೋಪಿ ಪಾಕಿಸ್ತಾನ ಮತ್ತು ನೇಪಾಳದ ಜನರೊಂದಿಗೆ ಸಂಪರ್ಕದಲ್ಲಿದ್ದ. ಮೊದಲು ಹಿಂದೂ ಸಂಘಟನೆಯೊಂದರ ಮುಖಂಡನ ಕೊಲೆಗೆ ಯೋಜನೆ ರೂಪಿಸಿದ್ದು ತಿಳಿದುಬಂದಿದೆ ಎಂದಿದ್ದಾರೆ.
ಬಂಧಿತ ಆರೋಪಿಯು ಪಾಕಿಸ್ತಾನ, ವಿಯೆಟ್ನಾಂ, ಇಂಡೋನೇಷ್ಯಾ, ಕಜಕಿಸ್ತಾನ್, ಲಾವೋಸ್‌ನಂತಹ ವಿವಿಧ ದೇಶಗಳ ಕೋಡ್‌ಗಳೊಂದಿಗೆ ವಾಟ್ಸಾಪ್ ಸಂಖ್ಯೆಗಳನ್ನು ಹೊಂದಿರುವವರ ಜೊತೆ ಸಂಪರ್ಕದಲ್ಲಿದ್ದರು ಎಂದು ಪ್ರಕಟಣೆ ತಿಳಿಸಿದೆ.