ಮದುವೆಗೆ ಮುಸ್ಲಿಂ ವಧು ಹಾಜರ್ – ಮಹಲ್ ಸಮಿತಿಯ ಕ್ಷಮೆಗೆ ಆಗ್ರಹ

Public TV
2 Min Read
Muslim bride attends own wedding

ತಿರುವನಂತಪುರಂ: ಮುಸ್ಲಿಂ ಸಂಪ್ರದಾಯದ ಪ್ರಕಾರ ಯಾವುದೇ ವಧು ತನ್ನ ಮದುವೆಗೆ ಹಾಜರಾಗಬಾರದು. ಆದರೆ ವಧುವೊಬ್ಬಳು ತನ್ನ ಮದುವೆಗೆ ತಾನೇ ಹಾಜರಾಗುವ ಮೂಲಕ ಇತಿಹಾಸವನ್ನು ಸೃಷ್ಟಿ ಮಾಡಿದ್ದಳು. ಆದರೆ ಇದನ್ನು ವಿರೋಧಿಸಿ ಮಹಲ್ ಸಮಿತಿಗೆ ಕ್ಷಮೆಯಾಚಿಸುವಂತೆ ಕೆಲವು ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ.

bride 768x508 1

ಇಸ್ಲಾಮಿಕ್ ವಿವಾಹದ ನಿರ್ಣಾಯಕ ಹಂತವಾದ ನಿಕಾಹ್ ಕಾರ್ಯಕ್ರಮದಲ್ಲಿ ವಧು ಬಂದಿದ್ದಳು. ಈ ಫೋಟೋ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಫುಲ್ ವೈರಲ್ ಆಗಿದೆ. ವಧು ಬಹಿಜಾ ದಲೀಲಾ ತಮ್ಮ ವಿವಾಹದಲ್ಲಿ ಉಪಸ್ಥಿತಿ ಇರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಕುರಿತು ಪರ-ವಿರೋಧ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಜನನಾಂಗಕ್ಕೂ ಟ್ಯಾಟೂ – ಜೀವವೇ ಹೋದಂಗೆ ಆಯ್ತು ಅಂದ ನಟಿ

MUSLIMS WOMEN

ವಧುವಿನ ಸಹೋದರ ಫಾಸಿಲ್ ಷಹಜಹಾನ್ ಈ ಕುರಿತು ಮಾಹಿತಿ ನೀಡಿದ್ದು, ವಧು ಸ್ಥಳದಲ್ಲಿ ಕುಳಿತುಕೊಳ್ಳಬಹುದೇ ಎಂದು ನಾವು ಮದುವೆ ನಡೆದ ಮಹ ಬಳಿ ಕೇಳಿದ್ದೆವು. ಮಹಲ್ ಕಮಿಟಿಯಲ್ಲಿ ಇವರೆಲ್ಲ ನಮಗೆ ಬಹಳ ವರ್ಷಗಳಿಂದ ಗೊತ್ತು ಎಂದು ಹೇಳಿ ಮಹಲ್ ಕಾರ್ಯದರ್ಶಿ ನಮಗೆ ಅನುಮತಿ ನೀಡಿದರು. ಮದುವೆಯಲ್ಲಿ 400 ಜನರು ಭಾಗವಹಿಸಿದ್ದರು. ಎಲ್ಲರಿಗೂ ಮದುವೆ ಸಂತೋಷವಾಯಿತು. ಆ ಸಮಯದಲ್ಲಿ ಯಾವುದೇ ವಿವಾದ ಅಥವಾ ಪ್ರಶ್ನೆ ಇರಲಿಲ್ಲ. ನಂತರ ಕೆಲವರು ಫೇಸ್‍ಬುಕ್‍ನಲ್ಲಿ ಮದುವೆಯ ಬಗ್ಗೆ ಮೆಚ್ಚುಗೆಯಿಂದ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ವೀಡಿಯೋಗಳನ್ನು ಸಹ ಮಾಡಿದರು. ಇದಾದ ಬಳಿಕ ಈ ಕುರಿತು ಚರ್ಚೆ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

marrige holl

ಕೆಲವರು ಈ ಮದುವೆಗೆ ಅನುಮತಿ ನೀಡಿದ ಮಹಲ್ ಸಮಿತಿಯನ್ನು ಪ್ರಶ್ನಿಸಿದ್ದಾರೆ. ವಧು ಹಾಜರಾಗಿದ್ದು ತಪ್ಪು. ಮಹಲ್ ಸಮಿತಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ನಡೆದಿದ್ದೇನು?
ಕೇರಳದ ಪರಕಡವು ಮೂಲದ ಕೆ.ಎಸ್.ಉಮ್ಮರ್ ಎಲ್ಲ ತಂದೆಯಂತೆ ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಎಂಬ ಕನಸನ್ನು ಕಂಡಿದ್ದರು. ಆದರೆ ಅವರಿಗೆ ಮಗಳ ಮದುವೆಯಂದು ಆಕೆಯೇ ಹಾಜರು ಇಲ್ಲದಿದ್ದರೆ ಹೇಗೆ ಎಂದು ಭಾವಿಸಿ ಮಗಳನ್ನು ಕಲ್ಯಾಣ ಮಂಟಪಕ್ಕೆ ಕರೆ ತಂದಿದ್ದರು.

ತಮ್ಮ ಸಂಪ್ರದಾಯದಲ್ಲಿ ಮದುಮಗಳು ತನ್ನ ಮದುವೆಗೆ ಹೋಗುವ ಅವಕಾಶ ಇಲ್ಲ ಎನ್ನುವುದು ಅವರನ್ನು ಬೇಸರಕ್ಕೆ ತಳ್ಳಿತ್ತು. ಆದರೂ ಅವರು ಗಟ್ಟಿ ಮನಸ್ಸು ಮಾಡಿ, ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅವರ ಮಗಳು ಬಹಾಜಾ ಕೂಡ ಈ ಮದುವೆಯನ್ನು ತುಂಬಾ ಖುಷಿಯಿಂದ ಒಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ಮಸೀದಿ ಪ್ರವೇಶಿಸಿ ತನ್ನ ಮದುವೆಗೆ ಸಾಕ್ಷಿಯಾದ ವಧು – ಕೇರಳದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ

marrige

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಉಮ್ಮರ್, ಇಸ್ಲಾಂನಲ್ಲಿ ಯಾವುದೇ ಸ್ಥಾನವಿಲ್ಲದ ಕೆಟ್ಟ ಆಚರಣೆಗಳನ್ನು ನಾವು ತಿರಸ್ಕರಿಸುವ ಕಾಲ ಬಂದಿದೆ. ನನ್ನ ಮಗಳು ಸೇರಿದಂತೆ ವಧುಗಳಿಗೆ ಅವರ ಮದುವೆಗೆ ಭಾಗಿಯಾಗುವುದು ಅವರ ಹಕ್ಕು. ಅದಕ್ಕೆ ನಾವೇ ಮೊದಲು ಈ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ಈ ನಿರ್ಧಾರಕ್ಕೆ ವರನ ಮನೆಯವರೂ ಒಪ್ಪಿಕೊಂಡರು. ಈ ಹಿನ್ನೆಲೆಯಲ್ಲಿ ನಾವು ಮಹಲ್ ಸಮಿತಿಯನ್ನು ಸಂಪರ್ಕಿಸಿದೆವು. ಅವರ ಜೊತೆ ಚರ್ಚಿಸಿದ ಬಳಿಕ ನಮ್ಮ ಈ ವಿಭಿನ್ನ ಯೋಚನೆಗೆ ಅವರೂ ಅಭಿನಂದಿಸಿದರು. ಎಲ್ಲರ ಸಹಕಾರದಿಂದ ಸಂಪ್ರದಾಯ ಮೀರಿ ಮದುವೆ ಮಾಡಲು ಅನುಕೂಲವಾಯಿತು ಎಂದು ಬರೆದುಕೊಂಡಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *