ತಿರವನಂತಪುರಂ: ಭಾರತದಲ್ಲಿ ಈಗಿನ ಮಹಿಳೆಯರು ತಮ್ಮ ಧರ್ಮಗಳಲ್ಲಿನ ಸಾಂಪ್ರದಾಯಿಕ ಚಿಂತನೆಗಳನ್ನು ಮುರಿಯುತ್ತಿದ್ದಾರೆ. ತಮಗೆ ಸರಿ ಎನಿಸಿದ್ದನ್ನು ಯಾವುದೇ ಹಿಂಜರಿಕೆಯಿಲ್ಲದೇ ಮಾಡುತ್ತಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ಇತರೆ ಧರ್ಮದ ಮಹಿಳೆಯರಿಗಿಂತ ಹೆಚ್ಚು ಕಟ್ಟುಪಾಡು, ನಿರ್ಬಂಧಗಳಿರುತ್ತವೆ. ಆ ಸಂಪ್ರದಾಯವನ್ನು ಮುರಿದು ಮುಸ್ಲಿಂ ಮಹಿಳೆಯೊಬ್ಬರು ಗಮನ ಸೆಳೆದಿದ್ದಾರೆ.
ಮೊದಲ ಬಾರಿಗೆ ಕೇರಳದ ಮುಸ್ಲಿಂ ವಧು ತನ್ನ ಮದುವೆಯಲ್ಲಿ ವರ, ಆಕೆಯ ತಂದೆ ಮತ್ತು ಎರಡೂ ಕುಟುಂಬಗಳ ಇತರ ಬಂಧುಗಳೊಂದಿಗೆ ಮಸೀದಿಯಲ್ಲಿ ಭಾಗವಹಿಸಿ ಸಂಪ್ರದಾಯ ಮುರಿದಿದ್ದಾರೆ. ಆ ಮೂಲಕ ಸಮುದಾಯದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದ್ದಾರೆ. ಇದನ್ನೂ ಓದಿ: ಬೈಕಾಟ್ ಲಾಲ್ ಸಿಂಗ್ ಚಡ್ಡಾ: ಇದು ಆಮೀರ್ ಖಾನ್ ಮಾಡಿರುವ ಸಂಚು ಎಂದು ಆರೋಪಿಸಿದ ಕಂಗನಾ
ಸಾಮಾನ್ಯವಾಗಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಮಸೀದಿಗೆ ಪ್ರವೇಶ ಇರುವುದಿಲ್ಲ. ಮದುವೆ ವೇಳೆ ವರನೊಂದಿಗೆ ವಧು ಅತಿಥಿ ಸತ್ಕಾರ ಸ್ವೀಕರಿಸುವಂತಿಲ್ಲ. ಸಮುದಾಯದಲ್ಲಿ ಹೀಗೆ ಅನೇಕ ಸಂಪ್ರದಾಯಗಳಿವೆ. ಆದರೆ ಕೇರಳದ ವಧು ಈ ಸಂಪ್ರದಾಯವನ್ನು ಮುರಿದಿದ್ದಾರೆ. ಇದಕ್ಕೆ ಆಕೆಯ ತಂದೆಯೂ ಸಾಥ್ ನೀಡಿದ್ದಾರೆ.
ನನ್ನ ಮಗಳು ಬಹಾಜಾಳ ಉಪಸ್ಥಿತಿಯಲ್ಲೇ ಆಕೆಯ ಮದುವೆ ಸಮಾರಂಭವನ್ನು ನೋಡಬೇಕು ಎಂದು ವರನ ಕುಟುಂಬದವರು ಹಾಗೂ ನಾವು ಬಯಸಿದ್ದೆವು ಎಂದು ಪರಕಡವು ಮೂಲದ ಕೆ.ಎಸ್.ಉಮ್ಮರ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹರ್ ಘರ್ ತಿರಂಗಾಕ್ಕೆ ಪ್ರೇರಣೆ ನೀಡುವ ಸಂಕಲ್ಪದೊಂದಿಗೆ ತಿರಂಗಾ ರ್‍ಯಾಲಿಯಲ್ಲಿ ಜೋಶಿ ಭಾಗಿ
ಇಸ್ಲಾಂನಲ್ಲಿ ಇಲ್ಲದ ಇಂತಹ ಸಂಪ್ರದಾಯವನ್ನು ನಾವು ಧಿಕ್ಕರಿಸುವ ಸಮಯ ಬಂದಿದೆ. ನನ್ನ ಮಗಳು ಸೇರಿದಂತೆ ಇತರೆ ಹೆಣ್ಣುಮಕ್ಕಳು ತಮ್ಮ ಮದುವೆಗೆ ಸಾಕ್ಷಿಯಾಗುವ ಹಕ್ಕನ್ನು ಹೊಂದಿದ್ದಾರೆ ಎಂದು ಉಮ್ಮರ್ ಪ್ರತಿಪಾದಿಸಿದ್ದಾರೆ.
ನಮ್ಮ ಈ ಆಲೋಚನೆಯನ್ನು ಮಹಲ್ ಸಮಿತಿಗೆ ತಿಳಿಸಿದ್ದೆವು. ಸುದೀರ್ಘ ಚರ್ಚೆ ಬಳಿಕ ಅವರು ನಮ್ಮ ಆಲೋಚನೆಯನ್ನು ಒಪ್ಪಿಕೊಂಡರು. ನಮ್ಮ ವಿಭಿನ್ನ ಆಲೋಚನೆ ಮತ್ತು ಆಚರಣೆಗೆಗಾಗಿ ಅಭಿನಂದನೆ ಕೂಡ ಸಲ್ಲಿಸಿದರು ಎಂದು ತಿಳಿಸಿದ್ದಾರೆ.
ಕಳೆದ ವಾರ ಪರಕಡವುನಲ್ಲಿ ಮದುವೆಯೊಂದು ನಡೆದಿತ್ತು. ಆ ಸಮಾರಂಭದಲ್ಲಿ ಮದುವೆಗೆ ಸಾಕ್ಷಿಯಾಗಲು ವಧುವಿಗೆ ಅವಕಾಶ ನೀಡಲಾಯಿತು. ಆದರೆ ಸಮಾರಂಭವನ್ನು ಮಸೀದಿ ಆವರಣದಲ್ಲಿ ನಡೆಸಲಾಯಿತು. ಮಸೀದಿ ಒಳಗೆ ನಡೆಸಲು ಅವಕಾಶ ಕೊಡಲಿಲ್ಲ. ಆದರೆ ನನ್ನ ಮಗಳು ಮಸೀದಿ ಒಳಗೆ ತನ್ನ ಮದುವೆ ಸಮಾರಂಭಕ್ಕೆ ಸಾಕ್ಷಿಯಾಗಿದ್ದಳು ಎಂದು ಉಮ್ಮರ್ ಹೇಳಿಕೊಂಡಿದ್ದಾರೆ.
ವಧುವಿನ ಕುಟುಂಬವು ವಿನಂತಿ ಮಾಡಿದಾಗ ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಒಪ್ಪಿಕೊಂಡೆವು. ಭವಿಷ್ಯದಲ್ಲಿ ಇಂತಹ ಹೊಸ ಸಂಪ್ರದಾಯಗಳಿಗೆ ನಾವು ಸಂತೋಷ ಪಡುತ್ತೇವೆ. ಕುಟುಂಬದವರು ಬಯಸಿದರೆ ಮಸೀದಿಯೊಳಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ವಧುವಿಗೆ ಅವಕಾಶವಿದೆ ಎಂದು ಮಹಲ್ ಕಾರ್ಯದರ್ಶಿ ಇ.ಜೆ.ನಿಯಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ED ಅಧಿಕಾರ ಎತ್ತಿಹಿಡಿದ ಸುಪ್ರೀಂ – ʻಅಪಾಯಕಾರಿ ತೀರ್ಪುʼ ಎಂದ ವಿಪಕ್ಷಗಳು
ಮುಸ್ಲಿಂ ಸಮುದಾಯದ ಮದುವೆಗಳಲ್ಲಿ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಮುಸ್ಲಿಂ ವಿದ್ವಾಂಸ ಸಿ.ಹೆಚ್.ಮುಸ್ತಫಾ ಮೌಲವಿ ಅವರು ಪ್ರಯತ್ನಿಸಿದ್ದರು. ಈ ರೀತಿ ವಿವಾಹಗಳು ನಡೆಯಬಾರದು ಎಂದು ಅನೇಕರು ವಿರೋಧ ಕೂಡ ವ್ಯಕ್ತಪಡಿಸಿದ್ದರು.