ಹರ್ಷ ಕೊಲೆ ಪ್ರಕರಣ – ಹಿಂದೂಗಳಿಗೆ ಮುಸ್ಲಿಂ ಸಹೋದರರ ಸಾಂತ್ವನ

Public TV
1 Min Read
Shivamogga 3 2

ಶಿವಮೊಗ್ಗ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹರ್ಷ ಕೊಲೆ ಪ್ರಕರಣದ ವೇಳೆ ಆಸ್ತಿ, ಪಾಸ್ತಿ ಹಾನಿಯಾದ ಹಿಂದೂ ಸಹೋದರರ ಮನೆಗೆ ಮುಸ್ಲಿಂ ಸಹೋದರರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ದುಷ್ಕರ್ಮಿಗಳು ನಿರ್ದಾಕ್ಷಿಣ್ಯವಾಗಿ ಹರ್ಷನ ಹತ್ಯೆ ಗೈದಿದ್ದರು. ಈ ಘಟನೆ ಬಳಿಕ ಶಿವಮೊಗ್ಗದ ಟಿಪ್ಪುನಗರದಲ್ಲಿ ಹಿಂದೂ ಸಮುದಾಯದವರ ಹಲವರ ಆಸ್ತಿ, ಪಾಸ್ತಿ ಹಾಗೂ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಹಾನಿ ಮಾಡಿದ್ದರು. ಇದನ್ನೂ ಓದಿ: ಶಿವಮೊಗ್ಗ ಕೊಲೆ ಪ್ರಕರಣ – 6 ಆರೋಪಿಗಳಿಗೆ ನ್ಯಾಯಾಂಗ ಬಂಧನ

Shivamogga

ಇದೀಗ ಹಿಂದೂ ಸಹೋದರರು ಮನೆಗೆ ಮುಸ್ಲಿಂ ಸಹೋದರರ ಭೇಟಿ ನೀಡಿ ನಿಮ್ಮ ಜೊತೆ ನಾವಿದ್ದೇವೆ. ನಿಮ್ಮ ಆಸ್ತಿ, ಪಾಸ್ತಿಗೆ ಏನೇ ಹಾನಿ ಆಗಿದ್ದರೂ ನಾವು ಸಹಾಯ ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಈ ಘಟನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಇಂತಹ ಘಟನೆ ಈ ಹಿಂದೆ ನಡೆದಿಲ್ಲ. ಮುಂದೆಯೂ ನಡೆಯಬಾರದು ಎಂದು ತಿಳಿಸಿದ್ದಾರೆ.

Shivamogga 2 2

ಭಾನುವಾರ ಕ್ಯಾಂಟೀನ್‍ವೊಂದರ ಬಳಿ ಟೀ ಕುಡಿಯುತ್ತಾ ನಿಂತಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷನ ಮೇಲೆ ಯುವಕರ ಗುಂಪೊಂದು ಏಕಾಏಕಿ ದಾಳಿ ನಡೆಸಿತ್ತು. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿತ್ತು. ಈ ವೇಳೆ ದಾಳಿಗೆ ಒಳಗಾದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದನು. ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು.  ಇದನ್ನೂ ಓದಿ: ಮಗಳನ್ನು ಕೊಂದು, ಆತ್ಮಹತ್ಯೆಗೆ ಶರಣಾದ ತಂದೆ

Share This Article
Leave a Comment

Leave a Reply

Your email address will not be published. Required fields are marked *