ಲಕ್ನೋ: ಉತ್ತರ ಪ್ರದೇಶದಲ್ಲಿ ಮಾನ್ಯತೆ ಪಡೆಯದಿರುವ ಮದರಸಾಗಳ ಮೇಲೆ ಸಮೀಕ್ಷೆ ನಡೆಸುವ ನಿರ್ಧಾರವನ್ನು ಯೋಗಿ ಆದಿತ್ಯನಾಥ್ ಅವರ ಸರ್ಕಾರ ತೆಗೆದುಕೊಂಡಿದೆ. ಈ ನಡೆಯನ್ನು ಇಸ್ಲಾಮಿಕ್ ಪ್ರಮುಖ ಸಂಸ್ಥೆ ಜಮಿಯತ್ ಉಲೇಮಾ-ಎ-ಹಿಂದ್ ಬೆಂಬಲಿಸಲು ನಿರ್ಧರಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಲೇಮಾ-ಎ-ಹಿಂದ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಮೊಹಮ್ಮದ್ ಅಸದ್ ಮದನಿ ಅವರು, ಇಂದು ಮದರಸಾಗಳನ್ನು ಉತ್ತಮ ರೀತಿಯಲ್ಲಿ ನೋಡಲಾಗುತ್ತಿಲ್ಲ. ನಮ್ಮನ್ನು ಅರ್ಥಮಾಡಿಕೊಳ್ಳುವಂತೆ ನಾನು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ನಾವು ಯಾವಾಗಲೂ ನಮ್ಮ ಕರ್ತವ್ಯವನ್ನು ಅನುಸರಿಸುತ್ತೇವೆ. ನಾವು ಈ ಬಗ್ಗೆ ಮಾತನಾಡಲು ಸದಾ ಸಿದ್ಧರಿದ್ದೇವೆ, ಆದರೆ ಬಲವಂತದಿಂದಲ್ಲ. ನಮಗೆ ಸಮಯ ನೀಡಿ, ನಾವು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.
Advertisement
Advertisement
ಅಸ್ಸಾಂನಲ್ಲಿ ಮದರಸಾಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಅಸ್ಸಾಂನಲ್ಲಿ ಏನಾಗುತ್ತಿದೆ ಎಂಬುದನ್ನು ನೀವು ನೋಡಿದ್ದೀರಿ. ಆ ವಿಧಾನ ಕಾನೂನುಬಾಹಿರವಾಗಿದೆ. ನಮಗೆ ಸ್ವಲ್ಪ ಸಮಯ ನೀಡಿದರೆ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿಯನ್ನು ಕಳುಹಿಸುತ್ತೇವೆ ಎಂದರು.
Advertisement
ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದ್ದರೂ ಅದನ್ನು ತಪ್ಪು ರೀತಿಯಲ್ಲಿ ಮಾಡಬಾರದು. ಏನನ್ನಾದರೂ ಸುಧಾರಿಸಲು ಯಾವಾಗಲೂ ಅವಕಾಶವಿದೆ. ಆದರೆ ಅದನ್ನು ಚಿತ್ರಿಸುವ ರೀತಿ ತಪ್ಪು ಎಂದು ಮೌಲಾನಾ ಹೇಳಿದರು. ಇದನ್ನೂ ಓದಿ: ಹಿಂಬದಿ ಸವಾರರಿಗೂ ಸೀಟ್‌ಬೆಲ್ಟ್ ಕಡ್ಡಾಯ, ತಪ್ಪಿದರೆ ದಂಡ
Advertisement
ಉತ್ತರ ಪ್ರದೇಶದ ಸರ್ಕಾರ ಮಾನ್ಯತೆ ಪಡೆಯದೇ ಇರುವ ಮದರಸಾಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರು, ಪಠ್ಯಕ್ರಮ ಹಾಗೂ ಯಾವುದೇ ಸರ್ಕಾರೇತರ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದೆಯೇ ಎಂಬುದನ್ನು ತಿಳಿದುಕೊಳ್ಳಲು ಸೆಪ್ಟೆಂಬರ್ 1 ರಂದು ಸಮೀಕ್ಷೆ ನಡೆಸುವುದಾಗಿ ಘೋಷಿಸಿದೆ. ಇದನ್ನೂ ಓದಿ: ಮಳೆ; ನಾಳೆ ಬೆಂಗಳೂರು ಪೂರ್ವ ಭಾಗದ ಶಾಲೆಗಳಿಗೆ ರಜೆ