ರಾಯಚೂರು: ಮಸ್ಕಿ(Maski) ಕ್ಷೇತ್ರದ ಶಾಸಕ ಬಸನಗೌಡ ತುರವಿಹಾಳ ಪುತ್ರ ಹಾಗೂ ಸಹೋದರ ಮೊಲಗಳ(Rabbit) ಬೇಟೆಯಾಡಿ ವಿಜೃಂಭಿಸಿದ ಘಟನೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.
ಗ್ರಾಮದಲ್ಲಿ ನಡೆದ ಶಂಕರಲಿಂಗೇಶ್ವರ ಜಾತ್ರೆ ಹಿನ್ನೆಲೆ ಶಾಸಕನ ಕುಟುಂಬದ ಸದಸ್ಯರು ಮೊಲಗಳ ಬೇಟೆಯಾಡಿ ಮಾರಕಾಸ್ತ್ರಗಳನ್ನು ಹಿಡಿದು ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಶಾಸಕ ಬಸನಗೌಡ ತುರವಿಹಾಳ ಸಹೋದರ ಸಿದ್ದನಗೌಡ ಹಾಗೂ ಪುತ್ರ ಸತೀಶ್ ಗೌಡ ಮೊಲಗಳನ್ನ ಕೊಂದು ಕಟ್ಟಿಗೆಗೆ ನೇತು ಹಾಕಿ ಮಾರಕಾಸ್ತ್ರ ಹಿಡಿದು ಸಂಭ್ರಮಾಚರಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ – ಮೂವರು ಮಕ್ಕಳು ಸೇರಿ 6 ಮಂದಿ ಸಜೀವ ದಹನ
ಮೊಲಗಳ ಬೇಟೆಯಾಡುವುದು ಅರಣ್ಯ ಇಲಾಖೆ ಕಾಯ್ದೆಯಡಿ ಅಪರಾಧ ಕೃತ್ಯವಾದರೂ ಇದುವರೆಗೆ ಅರಣ್ಯ ಇಲಾಖೆಯಿಂದ ಯಾವುದೇ ಕ್ರಮ ಜರುಗಿಸಿಲ್ಲ. ಇದನ್ನೂ ಓದಿ: ಟೀಚರಮ್ಮನ ಒಂದು ಮುತ್ತಿಗೆ 50,000 ರೂ. – ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಹನಿಟ್ರ್ಯಾಪ್ ಬೆದರಿಕೆ
ಇನ್ನೂ ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನ ಹಿಡಿದು ಮೆರವಣಿಗೆ ಮಾಡಿದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಸಾಮಾನ್ಯ ಜನರಿಗೆ ಒಂದು ನ್ಯಾಯ ಶಾಸಕನ ಕುಟುಂಬಕ್ಕೆ ಒಂದು ನ್ಯಾಯಾನಾ ಅನ್ನೋ ಪ್ರಶ್ನೆ ಸಾರ್ವಜನಿಕರಲ್ಲಿ ಎದ್ದಿದೆ.