ದರ್ಶನ್ ಪ್ರಕರಣವನ್ನು ವಿಧಿಯಾಟ ಅಂತೀನಿ, ಸತ್ತವನಂತೂ ಒಳ್ಳೆಯವನಲ್ಲ: ವಿ.ಮನೋಹರ್

Public TV
2 Min Read
FotoJet 11

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy Murder Case) ನಟ ದರ್ಶನ್ (Actor Darshan) ಅರೆಸ್ಟ್ ಆಗಿದ್ದಾರೆ. ಇದೀಗ ದರ್ಶನ್ ಜೊತೆ ‘ಲಾಲಿಹಾಡು’ (Laali Haadu) ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ವಿ.ಮನೋಹರ್ ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣವನ್ನ ವಿಧಿಯಾಟ ಎನ್ನುತ್ತೇನೆ. ಸತ್ತವನಂತೂ ಖಂಡಿತ ಒಳ್ಳೆಯವನಲ್ಲ ಎಂದು ಪಬ್ಲಿಕ್‌ ಟಿವಿಗೆ ವಿ. ಮನೋಹರ್ ಮಾತನಾಡಿದ್ದಾರೆ.

DARSHAN RENUKASWAMY

ದರ್ಶನ್ ಪ್ರಕರಣವನ್ನು ವಿಧಿಯಾಟ ಅಂತೀನಿ. ಆಕಸ್ಮಿಕವಾಗಿ ಇದು ನಡೆದುಹೋಗಿದೆ. ಸತ್ತವನಂತೂ ಖಂಡಿತ ಒಳ್ಳೆಯವನಲ್ಲ. ಸಾವಿರಾರು ಹೆಣ್ಣು ಮಕ್ಕಳಿಗೆ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡಿರುವ ವಿಕೃತಕಾಮಿ ಎಂದು ಗುಡುಗಿದ್ದಾರೆ. ಅವನ ಪಾಪದ ಕೊಡ ತುಂಬಿದೆ ಅದಕ್ಕೆ ತಕ್ಕ ಶಿಕ್ಷೆ ಆಗಿದೆ. ಆದರೆ ಇದು ಪೊಲೀಸ್‌ನವರಿಂದ ಆಗಬೇಕಿತ್ತು. ಆದರೆ ದರ್ಶನ್ ಸರ್ ಬ್ಯಾಡ್ ಟೈಂ ಆಗಿರಬಹುದು. ಅವರು ಆ ಕಳಂಕದಿಂದ ಹೊರಬಂದು ಮೊದಲಿನಂತೆ ಸಿನಿಮಾದಲ್ಲಿ ಆಕ್ಟ್ ಮಾಡಲಿ ಎಂದು ವಿ. ಮನೋಹರ್ (Music Director V. Manohar) ಮಾತನಾಡಿದ್ದಾರೆ. ಇದನ್ನೂ ಓದಿ:ಕುವೆಂಪು ಕೃತಿಯಿಂದ ಪ್ರೇರಣೆ- ಯುವ ನಟನಿಗೆ ಸಿಂಪಲ್ ಸುನಿ ಆ್ಯಕ್ಷನ್ ಕಟ್

ದರ್ಶನ್ ಹೀರೋ ಆಗುವ ಮೊದಲೇನೇ ‘ಜನುಮದ ಜೋಡಿ’ ಚಿತ್ರಕ್ಕೆ ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ರಲ್ವಾ ಆವಾಗಲೇ ಪರಿಚಯ ಇತ್ತು. ಆಗಾಗ ಮುಹೂರ್ತ ಕಾರ್ಯಕ್ರಮಗಳಲ್ಲಿ ಸಿಗುತ್ತಾ ಇದ್ವಿ. ದರ್ಶನ್ ಬಹಳ ಸಹೃದಯಿ ಮನುಷ್ಯ. ಅನೇಕರಿಗೆ ಕಷ್ಟದಲ್ಲಿ ಸಹಾಯ ಮಾಡಿದ್ದಾರೆ. ‘ಲಾಲಿಹಾಡು’ ಸಿನಿಮಾ ಸಮಯದಲ್ಲಿ ನನಗೂ ಸಹಾಯ ಮಾಡಿದ್ದರು. ಕೆಲಸ ಮಾಡುವಾಗ ನನಗೆ ಡಯಟ್ ಮಾಡೋದು ಹೇಗೆ? ಯಾವ ವ್ಯಾಯಾಮ ಮಾಡಬೇಕು ಎಲ್ಲಾ ಹೇಳ್ತಿದ್ದರು. ಅದಾದ್ಮೇಲೆ ಮಧ್ಯೆ ಗ್ಯಾಪ್ ಆಯ್ತು ಎಂದು ವಿ.ಮನೋಹರ್ ಮಾತನಾಡಿದ್ದಾರೆ.

ಇತ್ತೀಚೆಗೆ ಈ ಘಟನೆ ಆಗೋ ಮೂರು ದಿನದ ಮುಂಚೆ ನಾನು ಫೋನ್ ಮಾಡಿ ಕೇಳಿದೆ, ದರ್ಶನ್ ಸರ್ ‘ಲಾಲಿಹಾಡು’ ಆದ್ಮೇಲೆ ನಾವು ಮತ್ತೆ ಮಾಡಿಲ್ಲ ಅಂತ. ಖಂಡಿತ ಜೊತೆಯಲಿ ಕೆಲಸ ಮಾಡೋಣ ಎಂದರು. ಅದಾದ್ಮೇಲೆ ಮೂರು ದಿನದಲ್ಲಿ ಈ ಪ್ರಕರಣ ಆಯ್ತು. ಈ ಕಳಂಕದಿಂದ ಅವರು ಹೊರ ಬರಲಿ ಮತ್ತೆ ಸಿನಿಮಾಗಳಲ್ಲಿ ಮಾಡಲಿ. ಇಂಥಹ ದುರ್ಘಟನೆಗಳು ಯಾವತ್ತೂ ಆಗದೆ ಇರಲಿ ಎಂದು ಆಶಿಸುತ್ತೇನೆ ಎಂದು ದರ್ಶನ್ ಪ್ರಕರಣ ಕುರಿತು ಮನೋಹರ್ ಮಾತನಾಡಿದರು.

Share This Article