Cinema
ಮಂಗ್ಳೂರಲ್ಲಿ ಅಪಾಯದಿಂದ ಪಾರಾದ ಅರ್ಜುನ್ ಜನ್ಯ!

ಮಂಗಳೂರು: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಂಗಳೂರಿನ ಕಾರ್ಯಕ್ರಮವೊಂದರ ವೇಳೆ ಅಪಾಯದಿಂದ ಪಾರಾಗಿದ್ದಾರೆ.
ನಗರದ ಮಾಲ್‍ವೊಂದರಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಬೈಕ್ ಕ್ರ್ಯಾಕರ್ಸ್ ಬೆಂಕಿ ಹೊತ್ತಿಕೊಂಡಿದ್ದು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮಂಗಳೂರಿನ ಫೋರಂ ಮಾಲ್ ನಲ್ಲಿ ಮೆಕ್ ಡಾವೆಲ್ ಕಂಪನಿ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಪಾಲ್ಗೊಂಡಿದ್ದರು. ವೇದಿಕೆಗೆ ಬೈಕ್ ಏರಿ ಬರುವ ವೇಳೆ ಕ್ರ್ಯಾಕರ್ಸ್ ಉರಿಸಲಾಗಿತ್ತು. ಅರ್ಜುನ್ ಬೈಕಿನಿಂದ ಇಳಿಯುವ ವೇಳೆ ಕ್ರ್ಯಾಕರ್ಸ್ ಉರಿ ಭುಜಕ್ಕೆ ಮತ್ತು ಕೈಗೆ ತಾಗಿದ್ದು ಸುಟ್ಟ ಗಾಯಗಳಾಗಿವೆ.
ಬೈಕ್ ನಿಂದ ಇಳಿದ ಅರ್ಜುನ್ ಜನ್ಯ ನೇರವಾಗಿ ವೇದಿಕೆಗೆ ಹತ್ತಿ ಹಾಡು ಹಾಡಿ ಸಂಗೀತಪ್ರಿಯರನ್ನು ರಂಜಿಸಿದರು.
