ನಾನ್‌ವೆಜ್ ಪ್ರಿಯರಿಗೆ ಚಿಕನ್ 65 ಎಂದರೆ ಬಾಯಲ್ಲಿ ನೀರೂರುತ್ತದೆ. ಆದರೆ ನೋಡಲು ಅದೇ ರೀತಿ ಕಾಣುವ ಹಾಗೂ ಅದೇ ರುಚಿ ನೀಡುವ ಮಶ್ರೂಮ್ 65 ಯಾವತ್ತಾದರೂ ತಿಂದಿದ್ದೀರಾ? ತಿಂದಿಲ್ಲ ಅಂದ್ರೆ ಒಂದು ಸಲ ತಿಂದುನೋಡಿ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮಶ್ರೂಮ್ 65 ಹೇಗೆ ಮಾಡುವುದು ಎಂದು ತಿಳಿಸಿಕೊಡುತ್ತೇವೆ. ಇದೊಂದು ಸಿಂಪಲ್ ರೆಸಿಪಿ ಆಗಿದ್ದು, ಮಳೆ ಬಂದಾಗ ಬಿಸಿ ಬಿಸಿಯಾಗಿ ತಿನ್ನಲು ತುಂಬಾ ಮಜವಾಗಿರುತ್ತದೆ. ಇದನ್ನೂ ಓದಿ: ಫ್ರೀ ಟೈಮ್‌ನಲ್ಲಿ ಬೇಕೆನಿಸುತ್ತೆ ಚಟ್‌ಪಟಾ ಆಲೂ ಚಾಟ್
Advertisement
ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ ಮಶ್ರೂಮ್ – 1 ಕಪ್
ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
ನಿಂಬೆ ಹಣ್ಣು- ಅರ್ಧ
ಅಕ್ಕಿ ಹಿಟ್ಟು – 3 ಚಮಚ
ಮೈದಾ ಹಿಟ್ಟು – 1 ಚಮಚ
ಜೋಳದ ಹಿಟ್ಟು – 1 ಚಮಚ
ಅಚ್ಚ ಖಾರದ ಪುಡಿ – 1 ಚಮಚ
ಗರಂ ಮಸಾಲ – ಅರ್ಧ ಚಮಚ
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ:
Advertisement
- ಮೊದಲಿಗೆ ಒಂದು ಬೌಲಿಗೆ ಅಕ್ಕಿ ಹಿಟ್ಟು, ಜೋಳದ ಹಿಟ್ಟು ಹಾಗೂ ಮೈದಾ ಹಿಟ್ಟನ್ನು ಹಾಕಿಕೊಳ್ಳಿ. ಬಳಿಕ ಇದಕ್ಕೆ ಗರಂ ಮಸಾಲ, ಅಚ್ಚ ಖಾರದ ಪುಡಿ ಹಾಗೂ ಉಪ್ಪನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
- ಬಳಿಕ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿಕೊಳ್ಳಬೇಕು. ನಂತರ ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಅರ್ಧ ನಿಂಬೆಹಣ್ಣಿನ ರಸವನ್ನು ಇದಕ್ಕೆ ಹಿಂಡಿಕೊಳ್ಳಿ. ನಿಂಬೆ ಹಣ್ಣಿನ ರಸದ ಬದಲಿಗೆ ಮೊಸರನ್ನೂ ಹಾಕಿಕೊಳ್ಳಬಹುದು. ಬಳಿಕ ಇದನ್ನು ತೀರ ತೆಳ್ಳಗಾಗದಂತೆ ಸ್ವಲ್ಪ ಗಟ್ಟಿಯಾಗಿ ಕಲಸಿಕೊಳ್ಳಿ.
- ಬಳಿಕ ಈ ಮಿಶ್ರಣಕ್ಕೆ ಹೆಚ್ಚಿದ ಮಶ್ರೂಮ್ ಅನ್ನು ಸೇರಿಸಿಕೊಂಡು ಮಸಾಲೆ ಚನ್ನಾಗಿ ಅಂಟಿಕೊಳ್ಳುವಂತೆ ಕಲಸಿಕೊಳ್ಳಿ. ನಂತರ ಇದನ್ನು 10 ನಿಮಿಷಗಳ ಕಾಲ ನೆನೆಯಲು ಬಿಡಿ.
- ನಂತರ ಒಂದು ಬಾಣಾಲೆಯಲ್ಲಿ ಎಣ್ಣೆ ಕಾಯಲು ಇಡಿ. ಎಣ್ಣೆ ಚನ್ನಾಗಿ ಕಾದ ಬಳಿಕ ಗ್ಯಾಸ್ ಅನ್ನು ಮೀಡಿಯಮ್ ಫ್ಲೇಮ್‌ನಲ್ಲಿ ಇಟ್ಟುಕೊಂಡು ಒಂದೊಂದಾಗಿ ಮಶ್ರೂಮ್ ಅನ್ನು ಎಣ್ಣೆಯಲ್ಲಿ ಬಿಡಿ. ಮಶ್ರೂಮ್ ಬಣ್ಣ ಕೆಂಪಾಗುವವರೆಗೂ ಸೌಟಿನಲ್ಲಿ ತಿರುಗಿಸಲು ಹೋಗಬೇಡಿ. ಹೀಗೆ ತಿರುಗಿಸಿದರೆ ಅದರ ಮಸಾಲೆ ಬಿಡುವ ಸಾಧ್ಯತೆಯಿದೆ. ಆದ್ದರಿಂದ ಮಶ್ರೂಮ್ ಬಣ್ಣ ಸ್ವಲ್ಪ ಕೆಂಪಾದ ಬಳಿಕ ತಿರುವಿಕೊಳ್ಳಿ.
- ಇದನ್ನು 5ರಿಂದ 6 ನಿಮಿಷಗಳವರೆಗೆ ಚನ್ನಾಗಿ ಬೇಯಿಸಿಕೊಂಡ ಬಳಿಕ ಒಂದು ಸರ್ವಿಂಗ್ ಪ್ಲೇಟ್‌ಗೆ ಹಾಕಿಕೊಂಡು ಕೆಚಪ್ ಅಥವಾ ಚಿಲ್ಲಿ ಸಾಸ್‌ನೊಂದಿಗೆ ಸವಿಯಲು ಕೊಡಿ. ಇದನ್ನೂ ಓದಿ: ಉಳಿದ ಅನ್ನದಲ್ಲಿ ಮಾಡಿ ಬೊಂಬಾಟ್ ಮಶ್ರೂಮ್ ಫ್ರೈಡ್‌ರೈಸ್