ಚಿತ್ರದುರ್ಗ: ಮುರುಘಾ ಮಠದ (Murugha Mutt) ಶ್ರೀಗಳ ವಿರುದ್ಧ 2ನೇ ಪೋಕ್ಸೋ ಕಾಯ್ದೆ (POCSO Act) ದಾಖಲಾಗಿದ್ದು, 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ತನಿಖೆಯಲ್ಲಿ ದಿನಕ್ಕೊಂದು ಸ್ಫೋಟಕ ಹೇಳಿಕೆ ಕೇಳಿಬರುತ್ತಿದೆ. ನಿನ್ನೆಯಷ್ಟೇ ಮಠದ ವಿದ್ಯಾರ್ಥಿನಿಯೊಬ್ಬರು (Students) ಶ್ರೀಗಳು ರೂಂಗೆ ಹೋದ ನಂತರ ಬಟ್ಟೆಬಿಚ್ಚಲು ಹೇಳ್ತಿದ್ರು ಎಂಬ ಹೇಳಿಕೆ ನೀಡಿದ್ದರು. ಇದೀಗ ಮುರುಘಾ ಶ್ರೀಗಳ ಸಹಾಯಕ ಮಹಾಲಿಂಗಪ್ಪ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
Advertisement
ಕೆಲವೊಮ್ಮೆ ಬೆಡ್‌ಶೀಟ್ ಮೇಲೆ ಕಲೆಗಳು ಆಗಿರುತ್ತಿದ್ದವು, ಬೆಡ್‌ಶೀಟ್ ಅನ್ನು ಸ್ವಚ್ಛವಾಗಿ ತೊಳೆಯುವಂತೆ ಶ್ರೀಗಳು ಹೇಳುತ್ತಿದ್ದರು. ಹಗಲಿನಲ್ಲಿ ರಶ್ಮಿ (Rashmi) ಆಗಾಗ ಮಕ್ಕಳೊಂದಿಗೆ ಬರುತ್ತಿದ್ದಳು. ಕೆಲವೊಮ್ಮೆ ರಾತ್ರಿ ವೇಳೆ ಬಾಲಕಿಯರು ಹಿಂಬಾಗಿಲಿನಿಂದ ಶ್ರೀಗಳ ರೂಮ್‌ಗೆ ಹೋಗುತ್ತಿದ್ದರು. ಹೀಗೆಲ್ಲಾ ಮಠದಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ರೂಂಗೆ ಹೋದ ನಂತ್ರ ಬಟ್ಟೆ ಬಿಚ್ಚಲು ಶ್ರೀಗಳು ಹೇಳ್ತಿದ್ದರು: ಹಳೆ ವಿದ್ಯಾರ್ಥಿನಿ ಸ್ಫೋಟಕ ಹೇಳಿಕೆ
Advertisement
Advertisement
ಮುರುಘಾ ಶ್ರೀಗಳ (Sri Shivamurthy Murugha Sharanaru) ಅಡುಗೆಭಟ್ಟ ಕರಿಬಸಪ್ಪ ಮಾತನಾಡಿದ್ದು, ರಶ್ಮಿ ಮತ್ತು ಮಕ್ಕಳು ಶ್ರೀಗಳ ರೂಮ್‌ಗೆ ಹೋದಾಗ ನನ್ನನ್ನ ಒಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಸುಮಾರು ಗಂಟೆಗಳ ಬಳಿಕ ರಶ್ಮಿ ಮತ್ತು ಮಕ್ಕಳು ಹೊರಬರುತ್ತಿದ್ದರು. ಹಾಸ್ಟೆಲ್ ಬಾಲಕಿಯರನ್ನು ರೂಮ್‌ಗೆ ಕರೆಸಿಕೊಳ್ಳುತ್ತಾರೆಂದು ಜನ ಮಾತಾಡುತ್ತಿದ್ದರು. ನಮಗೂ ಸಹ ಕೆಲವೊಮ್ಮೆ ಅನುಮಾನ ಬರುತ್ತಿತ್ತು. ನಾವು ಬಾಯಿಬಿಟ್ಟರೆ ಕೆಲಸ ಬಿಡಿಸುತ್ತಾರೆಂಬ ಭಯವಿತ್ತು. ಹಾಸ್ಟೆಲ್‌ನ ಇಬ್ಬರು ಬಾಲಕಿಯರ ಮೇಲೆ ದೌರ್ಜನ್ಯವೆಸಗಿದ್ದಾರೆಂದು ಮಠದಲ್ಲಿ ಮಾತುಗಳು ಕೇಳಿಬರುತ್ತಿದೆ. ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಪೋಕ್ಸೋ ಸಂಕಷ್ಟ- ಪೊಲೀಸರಿಂದ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ
Advertisement
ಶ್ರೀಗಳ ಕಚೇರಿ ಕೆಲಸಗಾರ ಪ್ರಜ್ವಲ್ ಸಹ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಡ್ ರೂಮ್‌ನಲ್ಲಿ ಕೆಲಸವಿದೆ ಎಂದು ಕೆಲ ಬಾಲಕಿಯರನ್ನು ರೂಮ್‌ಗೆ ಕರೆಸಿಕೊಳ್ಳುತ್ತಿದ್ದರು. ಆದರೆ ರೂಮ್‌ನಲ್ಲಿ ಏನು ನಡೆದಿದೆ ಅಂತ ನನಗೆ ಗೊತ್ತಿಲ್ಲ ಎಂದಿದ್ದಾರೆ.