ಉಡುಪಿ: ಮುರುಘಾಶ್ರೀ ವಿರುದ್ಧ ಲೈಂಗಿಕ (POCSO Case) ಕಿರುಕುಳ ಪ್ರಕರಣದ ಕುರಿತು ಕೊನೆಗೂ ಮೌನ ಮುರಿದಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ಶ್ರೀಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Advertisement
ಉಡುಪಿಯ (Udupi) ಕೊಲ್ಲೂರಿಗೆ ಇಂದು ಭೇಟಿ ನೀಡಿದ್ದ ಬಿಎಸ್‌ವೈ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾಂಗಣದಲ್ಲಿ ನಡೆದ ಮೂಕಾಂಬಿಕಾ ದೇವಿಯ ಉತ್ಸವದಲ್ಲಿ ಭಾಗಿಯಾದರು. ಬಳಿಕ ಮುರುಘಾಶ್ರೀಗಳ ಲೈಂಗಿಕ ಕಿರುಕುಳ ಕೇಸ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಮುರುಘಾ ಶ್ರೀ (Sri Shivamurthy Murugha Sharanaru) ಕ್ಷಮಿಸಲಾಗದ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂತಾ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಎಲ್ಲರೂ ಇದನ್ನು ಖಂಡಿಸಬೇಕು. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂಗಳೂರು, ಉಡುಪಿಯವರು ಶಿಸ್ತಿನ ಜನಗಳು: ಹಾಡಿಹೊಗಳಿದ ಬಿಎಸ್‍ವೈ
Advertisement
Advertisement
ರಾಜ್ಯದಲ್ಲಿ ಬಿಜೆಪಿ 140 ಸೀಟು: ಈ ಬಾರಿಯ ಚುನಾವಣೆಯಲ್ಲಿ (Election 2023) ರಾಜ್ಯದಲ್ಲಿ ಬಿಜೆಪಿ 140 ಸೀಟು ಗೆಲ್ಲಲಿದೆ. ನಾನು ಮತ್ತು ಮುಖ್ಯಮಂತ್ರಿಗಳು ಕರಾವಳಿ ಭಾಗದಲ್ಲಿ ಪ್ರವಾಸ ಮಾಡಿದ್ದೇವೆ. ನಮಗೆ ಹಿಂದೆಂದೂ ಇಲ್ಲದ ಸ್ವಾಗತ ಸಿಕ್ಕಿದೆ. ಕರಾವಳಿ ಭಾಗದಲ್ಲಿ ನೂರಕ್ಕೆ ನೂರು ನಮ್ಮ ಎಲ್ಲಾ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:
Advertisement
ಸತೀಶ್ ಜಾರಕಿಹೊಳಿ ಗರಂ: ಸತೀಶ್ ಜಾರಕಿಹೊಳಿ (Satish Jarkiholi) `ಹಿಂದೂ’ (Hindu) ಪದ ಅಶ್ಲೀಲ ಹೇಳಿಕೆ ವಿಚಾರಕ್ಕೆ ಕಿಡಿ ಕಾರಿದ ಬಿಎಸ್‌ವೈ, ಹಿಂದೂಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದು ಖಂಡನೀಯ. ಕಾಂಗ್ರೆಸ್‌ನವರೇ ಇದನ್ನು ಖಂಡಿಸಿದ್ದಾರೆ. ಸತೀಶ್ ಜಾರಕಿಹೊಳಿ ರಾಜ್ಯದ ಜನರ ಕ್ಷಮೆ ಕೇಳಬೇಕು. ಹಗುರವಾಗಿ ಮಾತನಾಡಿದರೆ ದೊಡ್ಡವನಾಗುತ್ತೇನೆ ಎಂದು ಅಂದುಕೊಂಡಿದ್ದರೆ ಅದೊಂದು ಭ್ರಮೆ. ಸತೀಶ್ ಜಾರಕಿಹೊಳಿ ಗೌರವದಿಂದ ನಡೆದುಕೊಳ್ಳಬೇಕು. ಹಿಂದುಗಳಿಗೆ ಅಪಮಾನ ಆಗುವ ಹಾಗೆ ವರ್ತನೆ ಮಾಡಬಾರದು ಎಂದು ತಿಳುವಳಿಕೆ ಹೇಳಿದ್ದಾರೆ.