ದಾವಣಗೆರೆ: ಮುರುಘಾ ಶ್ರೀಗಳು (Murugha Shree) ಆರೋಪಿ ಅಷ್ಟೇ, ಅಪರಾಧಿ ಅಲ್ಲ. ಇದು ಅನಿರೀಕ್ಷಿತ ಆದೇಶ ಎಂದು ಶ್ರೀಗಳ ಆಪ್ತ ಶಿವಶಂಕರ್ ಹೇಳಿದ್ದಾರೆ.
ಶ್ರೀಗಳ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗುತ್ತಿದ್ದಂತೆಯೇ ವಿರಕ್ತ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿಗೆ ತಲೆ ಬಾಗುವುದಾಗಿ ಶ್ರೀಗಳು ಹೇಳಿದ್ದಾರೆ. ಇದರ ಹಿಂದೆ ಷಡ್ಯಂತ್ರ ಇದೆ. ಶ್ರೀಗಳು ಆರೋಪಿ ಅಷ್ಟೇ, ಅಪರಾಧಿ ಅಲ್ಲ ಎಂದು ಹೇಳಿದರು.
ನಮ್ಮ ವಕೀಲರು ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಾರೆ. ಸಂಕಷ್ಟ ಎಸುರಿದಲು ಶ್ರೀಗಳು ಸಿದ್ಧರಿದ್ದಾರೆ. ಕೋರ್ಟ್ ಆದೇಶದಿಂದ ಖುಷಿ, ದುಃಖ ಅಂತೇನಿಲ್ಲ. ಇದೊಂದು ಅನಿರೀಕ್ಷಿತ ಆದೇಶವಾಗಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಮತ್ತೆ ಅರೆಸ್ಟ್ ವಾರೆಂಟ್ ಜಾರಿ
ಪೋಕ್ಸೋ ಕೇಸಿನಲ್ಲಿ ಶ್ರೀಗಳಿಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಶ್ರೀಗಳು ಮೊದಲನೇ ಕೇಸಿನಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಇದೀಗ 2ನೇ ಕೇಸಿನಲ್ಲಿ ಬಂಧಿಸುವಂತೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಆದೇಶ ಮಾಡಿದೆ. ಈ ಮೂಲಕ ಕೇವಲ ನಾಲ್ಕೇ ದಿನಕ್ಕೆ ಶ್ರೀಗಳಿಗೆ ಮತ್ತೆ ಬಂಧನದ ಭೀತಿ ಶುರುವಾಗಿದೆ.