ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾ ಶ್ರೀ ಅವರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಭಾನುವಾರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಪೊಲೀಸರು ಶ್ರೀಗಳನ್ನು ಜೆಎಂಎಫ್‍ಸಿ ಕೋರ್ಟ್‌ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೋಮಲ ವಿಚಾರಣೆ ಮುಗಿತಾ ಎಂದು ಪ್ರಶ್ನಿಸಿದರು.
Advertisement
ವಿಚಾರಣೆ ಸಮಯದಲ್ಲಿ ಮತ್ತೆ ಕಸ್ಟಡಿಗೆ ಪೊಲೀಸರು ಕೇಳಲಿಲ್ಲ. ಹೀಗಾಗಿ ಜಡ್ಜ್ ಸೆ. 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದರು.
Advertisement
ಜಾಮೀನು ಸಿಗುವುದು ಕಷ್ಟ:
ಈವರೆಗೆ ದಾಖಲಾದ ಪೋಕ್ಸೋ ಕೇಸ್‍ಗಳಲ್ಲಿ ಅಷ್ಟು ಸುಲಭವಾಗಿ ಜಾಮೀನು ಸಿಕ್ಕಿಲ್ಲ. ಪೋಕ್ಸೋ ಕೇಸ್‍ನಲ್ಲಿ ಆರೋಪ ಸಾಬೀತಾದ್ರೆ 16 ವರ್ಷ ಒಳಗಿನ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ರೆ ಕನಿಷ್ಠ 20 ವರ್ಷ ಜೈಲುವಾಸವಾದರೆ ಗರಿಷ್ಠ ಜೀವಾವಧಿ ಶಿಕ್ಷೆ ಇದೆ. 16 ರಿಂದ 18 ವರ್ಷ ಒಳಗಿನ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕನಿಷ್ಟ 10 ವರ್ಷ ಜೈಲು ಶಿಕ್ಷೆ, ಗರಿಷ್ಟ ಜೀವಾವಧಿ ಶಿಕ್ಷೆಯನ್ನು ಶಿಕ್ಷೆ ವಿಧಿಸಲಾಗುತ್ತದೆ.