ChitradurgaDistrictsKarnatakaLatestMain Post

ಮುರುಘಾ ಕೇಸ್‌ – ಮಠಕ್ಕೆ ಕರೆದೊಯ್ದು ಸ್ಥಳ ಮಹಜರು

ಚಿತ್ರದುರ್ಗ: ಮುರುಘಾ ಶರಣರ ವಿರುದ್ಧ ಆರೋಪ ಮಾಡಿದ್ದ ಸಂತ್ರಸ್ತ ವಿದ್ಯಾರ್ಥಿನಿಯರನ್ನು ತನಿಖಾಧಿಕಾರಿ ಇವತ್ತು ಕೂಡ ವಿಚಾರಣೆಗೆ ಒಳಪಡಿಸಿದ್ದಾರೆ.

ಅಪ್ರಾಪ್ತ ಸಂತ್ರಸ್ತ್ರರನ್ನು ಮಠಕ್ಕೆ ಕರೆದೊಯ್ದ ಪೊಲೀಸರು ಸ್ಥಳ ಮಹಜರು ನಡೆಸಿದರು. ಇದಕ್ಕೂ ಮುನ್ನ ಬಾಲಮಂದಿರಕ್ಕೆ ಭೇಟಿ ನೀಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಧೀಶರು, ಮಕ್ಕಳ ಆಯೋಗದ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಎಸ್‍ಪಿ, ಜಿಪಂ ಸಿಇಓ ಸಂತ್ರಸ್ತ ಮಕ್ಕಳನ್ನು ವಿಚಾರಿಸಿದ್ರು.


ನಿರೀಕ್ಷಣಾ ಜಾಮೀನು ಕೋರಿ ಚಿತ್ರದುರ್ಗ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಶ್ರೀಗಳು ಮೋರೆ ಹೋಗಿದ್ದಾರೆ. ಇಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಸೆಪ್ಟೆಂಬರ್ 1ಕ್ಕೆ ವಿಚಾರಣೆ ಮುಂದೂಡಿದೆ.

ಕಾನೂನು ರೀತಿಯಾಗಿ ಕ್ರಮ ಆಗುತ್ತೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಶ್ರೀಗಳ ಪ್ರಕರಣವನ್ನು ವಿಶೇಷವಾಗಿ ತನಿಖೆ ಮಾಡಲಾಗ್ತಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ. ಸಿಟಿರವಿ ಮಾತನಾಡ್ತಾ, ನಿಸ್ಪಕ್ಷಪಾತ ತನಿಖೆ ನಡೀತಾ ಇದೆ. ತನಿಖೆಗೆ ಮೊದಲೇ ಶ್ರೀಗಳಿಗೆ ಅಪರಾಧಿ ಪಟ್ಟ ಕಟ್ಟೋಕೆ ಬರಲ್ಲ ಎಂದು ಹೇಳಿದರು.

Live Tv

Leave a Reply

Your email address will not be published.

Back to top button