ಮಂಡ್ಯ: ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆಗೆ ನುಗ್ಗಿ ಯಂತ್ರವನ್ನು ಸಾಗಣೆ ಮಾಡಲು ಸಚಿವ ಮುರುಗೇಶ್ ನಿರಾಣಿ ಸಿಬ್ಬಂದಿ ಪ್ರಯತ್ನಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಸದ್ಯ ಮೈಶುಗರ್ ಕಾರ್ಖಾನೆ ಆರಂಭವಾಗದ ಕಾರಣ ಖಾಸಗಿಯವರ ಕಣ್ಣು ಈ ಕಾರ್ಖಾನೆಯ ಮೇಲೆ ಬಿದ್ದಂತೆ ಕಾಣುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಮುರುಗೇಶ್ ನಿರಾಣಿಯ ಸಿಬ್ಬಂದಿ ನಡೆದುಕೊಂಡಿದ್ದಾರೆ.
Advertisement
Advertisement
ಸಚಿವ ಮುರುಗೇಶ್ ನಿರಾಣಿ ಗುತ್ತಿಗೆ ಪಡೆದಿರುವ ಮಂಡ್ಯ ಜಿಲ್ಲೆಯ ಪಾಂಡವಪುರದ ಪಿಎಸ್‌ಎಸ್‌ಕೆ ಕಾರ್ಖಾನೆಯಲ್ಲಿ ಟರ್ಬೈನ್ ಗವರ್ನರ್ ಎಂಬ ಯಂತ್ರ ಕೆಟ್ಟು ಹೋಗಿತ್ತು. ಇದರಿಂದಾಗಿ ಅಲ್ಲಿನ ಸಿಬ್ಬಂದಿ ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆಗೆ ಯಾರಿಗೂ ಹೇಳದೆ ನುಗ್ಗಿ ಆ ಯಂತ್ರವನ್ನು ತೆಗೆದುಕೊಂಡು ಹೋಗುವ ಕೆಲಸಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ನಕಲಿ ದಾಖಲೆಯಿಂದ ರೈಲು ಇಂಜಿನ್ ಮಾರಾಟ ಮಾಡಿದ ಎಂಜಿನಿಯರ್
Advertisement
Advertisement
ಪಿಎಸ್‌ಎಸ್‌ಕೆ ಕಾರ್ಖಾನೆಯಲ್ಲಿ ಟರ್ಬೈನ್ ಗವರ್ನರ್ ಎಂಬ ಯಂತ್ರಕ್ಕೆ ಸುಮಾರು 25 ಲಕ್ಷ ರೂ.ಗಳಿದೆ. ಹೀಗಾಗಿ ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆಯಿಂದ ಈ ಯಂತ್ರವನ್ನು ತೆಗೆದುಕೊಂಡು ಹೋಗಲು ಪಿಎಸ್‌ಎಸ್‌ಕೆ ಸಿಬ್ಬಂದಿ ಬಂದಿದ್ದಾರೆ. ಈ ಹಿಂದೆ ಇವರು ಮೈಶುಗರ್ ಕಾರ್ಖಾನೆಯ ಸಿಬ್ಬಂದಿ ಆಗಿದ್ದರು. ಇದನ್ನೂ ಓದಿ: ಮಾಜಿ ಪತ್ನಿಗೆ 5516 ಕೋಟಿ ಜೀವನಾಂಶ ನೀಡುವಂತೆ ದುಬೈ ದೊರೆಗೆ ಹೈಕೋರ್ಟ್ ಆದೇಶ
ನಿನ್ನೆ ಕಾರ್ಖಾನೆಯ ಬಳಿ ಬಂದ ಇವರು ಯಾರಿಗೂ ತಿಳಿಸದೆ ಮೈಶುಗರ್ ಒಳಭಾಗಕ್ಕೆ ನುಗ್ಗಿದ್ದಾರೆ. ನಂತರ ಅಲ್ಲಿ ಟರ್ಬೈನ್ ಯಂತ್ರವನ್ನು ಹುಡುಕಿ ಸಾಗಣೆ ಮಾಡಲು ಯತ್ನಿಸಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕರವೇ ಜಿಲ್ಲಾಧ್ಯಕ್ಷ ಜಯರಾಂ ಅವರನ್ನು ತಡೆದು ಪ್ರಶ್ನೆ ಮಾಡಿದ್ದಾರೆ. ನಂತರ ಅಲ್ಲಿಂದ ಪಿಎಸ್‌ಎಸ್‌ಕೆ ಸಿಬ್ಬಂದಿ ಪರಾರಿಯಾಗಿದ್ದಾರೆ. ಘಟನೆ ಹಿನ್ನೆಲೆ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.