ಬೆಳಗಾವಿ: ನವೆಂಬರ್‌ನಲ್ಲಿ ನಡೆದ ಬಂಡವಾಳ ಸಮಾವೇಶದಿಂದ ರಾಜ್ಯದಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ (Murugesh Nirani) ಭರವಸೆ ನೀಡಿದರು.
ವಿಧಾನ ಪರಿಷತ್ (Vidhan Parishad) ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ (Congress) ಯುಬಿ ವೆಂಕಟೇಶ್, ನಾಗರಾಜ್ ಯಾದವ್, ಮಂಜುನಾಥ್ ಭಂಡಾರಿ ಪ್ರಶ್ನೆ ಕೇಳಿದರು.
ಬಂಡವಾಳ ಹೂಡಿಕೆ ಸಮಾವೇಶದಿಂದ ಯಾವುದೇ ಅನುಕೂಲ ಆಗುತ್ತಿಲ್ಲ. ಸಮಾವೇಶ ಮಾಡಲು 75 ಕೋಟಿ ಖರ್ಚು ಮಾಡಲಾಗಿದೆ. ಕಳೆದ ಜಿಮ್‌ನ ಬಂಡವಾಳದಲ್ಲಿ 14% ಮಾತ್ರ ಬಂಡವಾಳ ಬಂದಿದೆ. ಹಾಗಾದ್ರೆ ಈ ಬಂಡವಾಳ ಹೂಡಿಕೆ ಸಮಾವೇಶದ ಲಾಭವೇನು. ಸುಮ್ಮನೆ ಸಮಾವೇಶಕ್ಕೆ ಹಣ ಖರ್ಚಾಗಿದೆ ಅಷ್ಟೆ. ಬೆಂಗಳೂರು ಬಿಟ್ಟು ಹೊರಗೆ ಬಂಡವಾಳ ಹೂಡಿಕೆ ಆಗಿಲ್ಲ ಯಾಕೆ? ಕೇವಲ ಎನರ್ಜಿ ಸೆಕ್ಟರ್‌ಗೆ ಮಾತ್ರ ಅವಕಾಶ ಕೊಡಲಾಗಿದೆ. ಸರ್ಕಾರ ಹೇಳಿದ ಹಾಗೆ ಉದ್ಯೋಗ ಸೃಷ್ಟಿ ಆಗಲ್ಲ ಎಂದು ಕಿಡಿಕಾರಿದರು.
ಇದಕ್ಕೆ ಸಚಿವ ನಿರಾಣಿ ಉತ್ತರ ನೀಡಿದರು. ನವೆಂಬರ್‌ನಲ್ಲಿ ನಡೆದ ಬಂಡವಾಳ ಹೂಡಿಕೆ ಸಮಾವೇಶದಲ್ಲಿ 9,81,784 ಕೋಟಿ ಹೂಡಿಕೆ ಆಗಿದೆ. ಸಮಾವೇಶದಲ್ಲಿ 15 ಸಾವಿರ ಪ್ರತಿನಿಧಿಗಳು ಭಾಗವಹಿಸಿದ್ದರು. ಜಪಾನ್, ಜರ್ಮನ್, ಫ್ರಾನ್ಸ್, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ನೆದರ್ಲೆಂಡ್ ದೇಶಗಳ ನಿಯೋಗ ಬಂದಿತ್ತು. 2012ರಲ್ಲಿ ನಮಗೆ 1 ಸಾವಿರ ಎಕರೆ ಟಾಟಾಗೆ ಅವರಿಗೆ ಕೊಡಲು ಆಗದೇ ಟಾಟಾ ಗುಜರಾತ್‌ಗೆ ಹೋಯ್ತು. 2012ರಲ್ಲಿ 1 ಲಕ್ಷ ಎಕರೆ ರೈತರಿಂದ ಭೂಮಿ ಸ್ವಾಧೀನ ಮಾಡಿಕೊಂಡೆವು. 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ನಾವು ವಶಪಡಿಸಿಕೊಂಡಿಸಿದ್ದ 1 ಲಕ್ಷ ಎಕರೆಯನ್ನು ಡೀನೋಟಿಫೈ ಮಾಡಿದರು. ಇದರಿಂದ ಭೂಮಿ ನಮಗೆ ಸಮಸ್ಯೆ ಆಯ್ತು ಎಂದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ, ಈಶ್ವರಪ್ಪ ನನ್ನ ಸಂಪರ್ಕದಲ್ಲಿದ್ದಾರೆ: ಬೊಮ್ಮಾಯಿ
2012ರಲ್ಲಿ ಸುಮಾರು 2 ಸಾವಿರ ಕೋಟಿ ಬಂಡವಾಳ ಇನ್ವೆಸ್ಟ್ ಆಗಿತ್ತು. ಅದರ ಬಡ್ಡಿಯಲ್ಲಿ ನಾವು ಸಮಾವೇಶ ಮಾಡಿದ್ದೇವೆ. ಈ ಬಾರಿಯ ಸಮಾವೇಶದಿಂದ 6 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ. 75% ಬಂಡವಾಳ ಹೂಡಿಕೆ ಆಗೋಕೆ ಸರ್ಕಾರ ಕ್ರಮವಹಿಸಲಾಗಿದೆ. ಬಂಡವಾಳ ಹೂಡಿಕೆ ಸಮಾವೇಶಕ್ಕೆ ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕಡಿಮೆ ಹಣ ಖರ್ಚು ಮಾಡಿದ್ದೇವೆ. ಬೆಂಗಳೂರು ಬಿಟ್ಟು ಬೇರೆ ನಗರದಲ್ಲೂ ಬಂಡಾಯ ಹೂಡಿಕೆಗೆ ಕ್ರಮವಹಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ನನ್ನನ್ನು ಆದಷ್ಟು ಬೇಗ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಿ: ಈಶ್ವರಪ್ಪ ಭಾವುಕ ಮಾತು