ಬೆಂಗಳೂರು: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಶಾಸಕ ಮುರುಗೇಶ್ ನಿರಾಣಿ ಇಂದು ಬೆಂಗಳೂರಿನ ಧವಳಗಿರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿದರು.
ಕಳೆದ ಮಂಗಳವಾರ ದಾವಣಗೆರೆಯಲ್ಲಿ ನಡೆದ ಹರ ಸಮಾವೇಶದಲ್ಲಿ ವಚನಾನಂದ ಸ್ವಾಮೀಜಿ, ಮುರುಗೇಶ್ ನಿರಾಣಿಗೆ ಮಂತ್ರಿ ಸ್ಥಾನಕ್ಕೆ ಆಗ್ರಹಿಸಿದ್ದಕ್ಕೆ ಸಿಎಂ ಯಡಿಯೂರಪ್ಪ ಸಿಟ್ಟು ಮಾಡಿಕೊಂಡಿದ್ದರು. ಆ ಘಟನೆ ನಂತರ ಮೊದಲ ಬಾರಿಗೆ ಇಂದು ಮುರುಗೇಶ್ ನಿರಾಣಿ ಅವರು ಸಿಎಂ ಬಿಎಸ್‍ವೈಯನ್ನು ಭೇಟಿ ಮಾಡಿದರು. ಹರ ಸಮಾವೇಶದಲ್ಲಿ ಮುರುಗೇಶ್ ನಿರಾಣಿ ಮೇಲೂ ಸಿಎಂ ಸಿಟ್ಟಾಗಿದ್ದರು. ಇದೀಗ ಸಿಎಂ ಸಿಟ್ಟು ತಗ್ಗಿದ ಮೇಲೆ ನಿರಾಣಿ ಭೇಟಿ ಮಾಡಿದ್ದು ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಬಿಎಸ್‍ವೈ – ವೇದಿಕೆ ಮೇಲೆಯೇ ಸ್ವಾಮೀಜಿ ವಿರುದ್ಧ ಕೆಂಡಾಮಂಡಲ
Advertisement
Advertisement
ಅದಾಗಲೇ ದಾವಣಗೆರೆ ಹರ ಸಮಾವೇಶದಲ್ಲಿ ನಡೆದ ಘಟನೆ ಬಗ್ಗೆ ಸ್ಪಷ್ಟೀಕರಣ ಕೊಟ್ಟು ಕ್ಷಮೆ ಕೇಳಿದ್ದರಿಂದ ಸಿಎಂ ಅವರ ಸಿಟ್ಟು ತಗ್ಗಿತ್ತು. ಹೀಗಾಗಿ ಮುರುಗೇಶ್ ನಿರಾಣಿಯವರ ಜೊತೆ ಸಿಎಂ ಎಂದಿನಂತೆ ಸಹಜವಾಗಿ ಮಾತಾಡಿದರು. ಇದೇವೇಳೆ, ದಾವಣಗೆರೆ ಹರ ಸಮಾವೇಶದಲ್ಲಿ ನಡೆದ ಘಟನೆಗೆ ಮುರುಗೇಶ್ ನಿರಾಣಿ, ಸಿಎಂ ಬಳಿ ಕ್ಷಮೆ ಕೇಳಿದರು ಎನ್ನಲಾಗಿದೆ. ಇದನ್ನೂ ಓದಿ: ವಚನಾನಂದ ಶ್ರೀಗಳ ಬೆಂಬಲಕ್ಕೆ ನಿಂತ ಡಿಕೆಶಿ- ಬಿಎಸ್‍ವೈಗೆ ತಿರುಗೇಟು
Advertisement
ಬಳಿಕ ಸಚಿವ ಸ್ಥಾನ ಕೊಡಬೇಕು ಎಂದು ಈ ಸಂದರ್ಭದಲ್ಲಿ ಮುರುಗೇಶ್ ನಿರಾಣಿ ನಯವಾಗಿಯೇ ಸಿಎಂ ಎದುರು ಬೇಡಿಕೆ ಇಟ್ಟರು. ಆದರೆ ಮುಖ್ಯಮಂತ್ರಿಗಳು ನಿರಾಣಿಯವರಿಗೆ ಯಾವುದೇ ಭರವಸೆ ಕೊಡದೆ ಅಮಿತ್ ಶಾ ಅವರ ಜೊತೆ ಮಾತುಕತೆ ನಡೆಸುತ್ತೇನೆ ನೋಡೋಣ ಏನಾಗುತ್ತೆ ಅಂತ ಹೇಳಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ‘ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ’- ಪ್ರಮಾದಕ್ಕೆ ಕ್ಷಮೆ ಕೇಳಿದ ವಚನಾನಂದಸ್ವಾಮೀಜಿ