ಕಲಬುರಗಿ: ಕಾಂಗ್ರೆಸ್ ಸರ್ಕಾರ ಗೊಂದಲ ಬಿಟ್ಟು ಸೂಕ್ತ ಆಡಳಿತ ನಡೆಸಲಿ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಕಳೆದೊಂದು ವರ್ಷದಲ್ಲಿ ಬರೀ ಗೊಂದಲ ಇದೆ. ಸಿಎಂ ಸಿದ್ದರಾಮಯ್ಯ ಅನುಭವಸ್ಥರು. ಆದಷ್ಟು ಬೇಗ ಗೊಂದಲ ಬಗೆಹರಿಸಿ ಅಭಿವೃದ್ಧಿಯತ್ತ ಚಿತ್ತ ಹರಿಸಬೇಕು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕೆ ಪತ್ರ ಬರೆದಿರೋದು ಬಂಡಾಯದ ಸೂಚನೆ – ರೇಣುಕಾಚಾರ್ಯ
31 ಹೊಸ ಕಾಂಗ್ರೆಸ್ ಶಾಸಕರು ಹೈಕಮಾಂಡ್ ಪತ್ರ ವಿಚಾರ ಪತ್ರ ಬರೆದಿದ್ದರಲ್ಲಿ ತಪ್ಪೇನಿಲ್ಲ. ಸಿದ್ದರಾಮಯ್ಯ ಸರ್ಕಾರಕ್ಕೆ ಪೂರ್ಣ ಬಹುಮತವಿದೆ. ಹೀಗಾಗಿ, ಗೊಂದಲ ಬಿಟ್ಟು ಸೂಕ್ತವಾಗಿ ಆಡಳಿತ ನಡೆಸಬೇಕು. ಡಿಕೆಶಿ ದೆಹಲಿಗೆ ಹೋಗ್ತಾರೆ, ಬರ್ತಾರೆ. ಅವರಲ್ಲಿ ಯಾರಾದ್ರು ಸಿಎಂ ಆಗಲಿ. ಮೊದಲು ಗೊಂದ ಬಗೆಹರಿಸಲಿ ಎಂದ ನಿರಾಣಿ ಸರ್ಕಾರಕ್ಕೆ ಕಿವಿ ಮಾತಿ ಹೇಳಿದ್ದಾರೆ.
ಇನ್ನು, ಗುಲ್ಬರ್ಗಾ ವಿವಿ ನನಗೆ ಗೌರವ ಡಾಕ್ಟರೇಟ್ ನೀಡಿದೆ. ಅದಕ್ಕಾಗಿ ರಾಜ್ಯಪಾಲರು ಹಾಗೂ ಉಪಕುಲಪತಿಗಳಿಗೆ ಧನ್ಯವಾದ ಅಂತಾ ನೀರಾಣಿ ಹೇಳಿದ್ದಾರೆ. ಇದನ್ನೂ ಓದಿ: ಕುರಿ ಕಾಯುವವರನ್ನ ಕುರಿಗಾಹಿಗಳ ನಿಗಮಕ್ಕೆ ಅಧ್ಯಕ್ಷನಾಗಿ ಮಾಡಬೇಕು – ಸಿಎಂಗೆ ಕುರಿಗಾಹಿಗಳ ಮನವಿ

