ಬೆಳಗಾವಿ: ಕಾಂಗ್ರೆಸ್ ಹೀಗೆ ಮಾಡಿದರೆ ಮುಂದಿನ ಜನಾಂಗಕ್ಕೆ ಕಾಂಗ್ರೆಸ್ ಇದೆಯೋ, ಇಲ್ಲವೋ ಗೊತ್ತಾಗುವುದಿಲ್ಲ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ಮುಸ್ಲಿಮರ ಆರ್ಥಿಕ ಬಹಿಷ್ಕಾರ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಇದರಲ್ಲಿ ಭಾಗವಹಿಸಿಲ್ಲ. ಈ ವಿಚಾರದ ಬಗ್ಗೆ ಚರ್ಚೆ ಆಗಿ ನಮ್ಮ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಹಿಂದೂ ಸಂಘಟನೆಗಳು ಆರ್ಥಿಕ ಬಹಿಷ್ಕಾರ ಮಾಡುತ್ತಿರುವ ಬಗ್ಗೆ ಮಾಧ್ಯಮದಲ್ಲಿ ನೋಡಿರುವೆ. ನೂರರಷ್ಟು ಶಾಂತಿ ಕಾಪಾಡುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ನಮ್ಮ ಗೃಹ ಸಚಿವರು ಸಶಕ್ತರಾಗಿದ್ದಾರೆ ಎಂದರು. ಇದನ್ನೂ ಓದಿ: ಮಂತ್ರಿ ಆಗ್ಲಿ, ಎಂಎಲ್‍ಎ ಆಗ್ಲಿ, ನಮ್ಮ ತಾತನ ಆಸ್ತಿಯಲ್ಲ; ಮುರುಗೇಶ್ ನಿರಾಣಿ
Advertisement
Advertisement
ಹಿಜಬ್, ಹಲಾಲ್ ವಿಚಾರ ಮುಂದಿಟ್ಟು ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‍ನವರ ಆರೋಪ ಸತ್ಯಕ್ಕೆ ದೂರವಾದದ್ದು, ಅವರದ್ದು ಬರೀ ಆಪಾದನೆ ಮಾಡುವ ಕೆಲಸವಷ್ಟೇ. ಇದರ ಜೊತೆಗೆ ಕೆಲವೊಂದು ಪಬ್ಲಿಕ್‍ಗೆ ತೊಂದರೆ ಆಗುವ ಜಾಗ ಇರುತ್ತವೆ. ಕೆಲವು ಕಡೆ ಸ್ಕೂಲ್, ಕಾಲೇಜು, ಆಸ್ಪತ್ರೆಗಳು ಇರುತ್ತವೆ. ಇಲ್ಲಿ ಹಿಂದೂಗಳು ಭಜನೆ ಮಾಡುವುದು, ಮುಸ್ಲಿಮರು ಮೈಕ್ ಹಚ್ಚುವುದು ಆಗಬಾರದು. ಎಲ್ಲಿ ತೊಂದರೆ ಆಗುವುದಿಲ್ಲ, ಅಲ್ಲಿ ಹಚ್ಚಿಕೊಳ್ಳಲು ಕೋರ್ಟ್ ಅವಕಾಶ ಮಾಡಿಕೊಟ್ಟಿದೆ. ಅಲ್ಲಿ ಯಾವುದೇ ರೀತಿ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ವಿವಾದಿತ ಸಮಾಧಿಯನ್ನ ಶಾಂತಿಯುತವಾಗಿ ಸ್ಥಳಾಂತರಿಸಿದ ಕ್ರೈಸ್ತ ಸಮುದಾಯ
Advertisement
Advertisement
ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದಲ್ಲಿ ಇರುವಷ್ಟು ಸೀಟ್ ಲೋಕಸಭೆಯಲ್ಲಿ ಬಂದಿಲ್ಲ. ಇದೇ ಮಾಡಿಕೊಂಡು ಹೋದರೆ ಲೆಕ್ಕ ಇಲ್ಲದಂತೆ ಆಗುತ್ತದೆ. ಯುಪಿಎ ಚುನಾವಣೆಯಲ್ಲಿ 400 ಸೀಟ್‍ನಲ್ಲಿ ಕಾಂಗ್ರೆಸ್‍ಗೆ ನಾಲ್ಕು ಸೀಟ್ ಬರಲಿಲ್ಲ. ಹೀಗೆ ಹೋದರೆ ಮುಂದಿನ ಜನಾಂಗಕ್ಕೆ ಕಾಂಗ್ರೆಸ್ ಇದೆಯೋ ಇಲ್ಲವೋ ಗೊತ್ತಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.