ವಿಜಯಪುರ: ನಗರ ಮತಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BasanaGauda Patil Yatnal) ಕೇವಲ ರಾಜ್ಯದಲದಲೇ ಅಲ್ಲಾ ದೇಶದಲ್ಲಿಯೇ ಬಿಜೆಪಿ ರೆಬಲ್ ಶಾಸಕ ಅಂತಾ ಪ್ರಸಿದ್ಧಿ ಪಡೆದಿದ್ದಾರೆ. ಯತ್ನಾಳ್ ರನ್ನ ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿತ್ತು. ತದನಂತರ ಕಳೆದ ಬಾರಿ ವಿಧಾನಸಭೆ ಚುನಾವಣೆ (Vidhanasabha Elections) ಯಲ್ಲಿ ಯಡಿಯೂರಪ್ಪನವರೇ ಬಿಜೆಪಿ ಹೈಕಮಾಂಡ್ (BJP Highcommand) ನ ಸೂಚನೆಯಂತೆ ಯತ್ನಾಳ್‍ರನ್ನ ಬಿಜೆಪಿಗೆ ಮರಳಿ ಕರೆತಂದಿದ್ದರು. ನಂತರ ಕೆಲ ದಿನಗಳು ಇಬ್ಬರ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ ಯಡಿಯೂರಪ್ಪ ಸಿಎಂ ಆದ 6 ತಿಂಗಳಲ್ಲಿ ಯತ್ನಾಳ್-ಯಡಿಯೂರಪ್ಪ ಸಂಬಂಧ ಹಳಸಿ ಹೋಯ್ತು. ಮುಂದೆ ಯಡಿಯೂರಪ್ಪ-ಯತ್ನಾಳ್ ಹಾವು ಮುಂಗುಸಿಯಂತಾದ್ರು.
Advertisement
ಇದರ ಮಧ್ಯೆ ಶುರುವಾಗಿದ್ದು, ಲಿಂಗಾಯತ ಪಂಚಮಸಾಲಿ ಮೀಸಲಾತಿ (Lingayat Panchamasali Reservation) ಹೋರಾಟ. ಇದನ್ನ ಮೊದಲು ಮುರಗೇಶ್ ನಿರಾಣಿ ಪ್ರಾರಂಭಿಸಿದಾದರೂ, ನಂತರ ಈ ಹೋರಾಟವನ್ನ ಕೈಗೆತ್ತಿಕೊಂಡಿದ್ದು ಯತ್ನಾಳ್. ಯತ್ನಾಳ್ ಇದರ ಮುಂದಾಳತ್ವ ವಹಿಸುತ್ತಿದಂತೆ ಯಡಿಯೂರಪ್ಪ, ವಿಜಯೇಂದ್ರ (B Y Vijayedra) ಮತ್ತು ಮುರುಗೇಶ್ ನಿರಾಣಿ ಹೋರಾಟದ ದಿಕ್ಕು ಬದಲಿಸಲು ನಾನಾ ಕಸರತ್ತುಗಳನ್ನು ನಡೆಸಿದರು. ಅಲ್ಲದೆ ಹೋರಾಟ ಕ್ರೆಡಿಟ್ ಯತ್ನಾಳ್‍ಗೆ ಸಿಗದಂತೆ ಇದುವರೆಗೂ ಕಾದುಕೊಂಡು ಹೊರಟಿದ್ದಾರೆ. ಇದರಿಂದ ಯಡಿಯೂರಪ್ಪ ಶಿಷ್ಯ ಮುರುಗೇಶ್ ನಿರಾಣಿ (Murugesh Nirani) ಮತ್ತು ಯತ್ನಾಳ್ ಟಾಕ್‍ವಾರ್ ಹೆಚ್ಚಾಗಿದ್ದು, ಮುಂಬರುವ ಚುನಾವಣೆಯಲ್ಲಿ ಯತ್ನಾಳ್‍ಗೆ ಟಿಕೆಟ್ ಸಿಕ್ಕರೆ ತಾನೇ ಬಿಜೆಪಿಯಲ್ಲೆ ಇರೊಲ್ಲ ಎಂದು ಹೇಳುವ ಮೂಲಕ ನಿರಾಣಿ ಬೆಂಬಲಿಗರ ತಲೆ ಕೆಡೆಸಿದ್ರು.
Advertisement
Advertisement
ನಿರಾಣಿಯ ಈ ಟಿಕೆಟ್ ತಪ್ಪಿಸುವ ಮತ್ತು ಪಕ್ಷದಿಂದಲೇ ಉಚ್ಛಾಟನೆಯ ವಿಷಯ ಹೊರಬರಲು ನಿರಾಣಿ ಹಿಂದೆ ಯಾವ ಕೈಗಳು ಇವೆ ಎಂಬುದು ಮುಖ್ಯವಾಗುತ್ತೆ. ಮೂಲಗಳ ಪ್ರಕಾರ ಯಡಿಯೂರಪ್ಪ ಆದೇಶದ ಮೇಲೆ ನಿರಾಣಿ ಫೀಲ್ಡಿಗೆ ಇಳಿದಿದ್ದು, ಯತ್ನಾಳ್ ಬಗ್ಗೆ ಮಾತನಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದನ್ನೂ ಓದಿ: ಯತ್ನಾಳ್ ವಿರುದ್ಧ ಸಿಎಂ, ನಿರಾಣಿ ಗರಂ; ಯತ್ನಾಳ್‌ಗೆ ಮೂಗುದಾರ ಹಾಕುವ ಬಗ್ಗೆ ನಡ್ಡಾ ಎದುರು ಪ್ರಸ್ತಾಪಕ್ಕೆ ನಿರ್ಧಾರ
Advertisement
ವಿಜಯಪುರ ಶಾಸಕನ ಕಾರ್ ಡ್ರೈವರ್ ಕೊಲೆಯಾಗಿದೆ ಅನ್ನೋ ನಿರಾಣಿ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ಸಿಎಂಗೆ ಪತ್ರ ಬರೆದಿರೋ ಯತ್ನಾಳ್, 24 ಗಂಟೆ ಒಳಗಾಗಿ ನಿರಾಣಿ ಹೇಳಿಕೆ, ಕೊಲೆ ಆರೋಪದ ಸಿಬಿಐ ತನಿಖೆಗೆ ಆದೇಶ ಕೊಡಬೇಕು ಅಂತ ಆಗ್ರಹಿಸಿದ್ದಾರೆ. ಆರೋಪ ಸುಳ್ಳಾದರೆ ಸಚಿವರನ್ನ ಸಂಪುಟದಿಂದ ತೆಗೆದು ಹಾಕಬೇಕು ಎಂದು ಯತ್ನಾಳ್ ಒತ್ತಾಯಿಸಿದ್ದಾರೆ. ಆದರೆ ನಿರಾಣಿ ಪರವಾಗಿ ಸಹೋದರ ಸಂಗಮೇಶ್ (Sangamesh) ಟ್ವೀಟ್ ಮಾಡಿದ್ದು, ಶಿಖಂಡಿ ಬಸ್ಯಾ ನಡುಬೀದಿಯಲ್ಲಿ ಬೆತ್ತಲಾಗುವ ಕಾಲ ಬಂದಿದೆ. ಬಾಯಿ ಹರುಕನಂತೆ ಮಾತನಾಡುವ ನಾಮರ್ಧ, ನಿನ್ನದೇ ಭಾಷೆಯಲ್ಲಿಯೇ ಉತ್ತರ ನೀಡುತ್ತೇನೆ. ನೇರ ಕಾದಾಟಕ್ಕೆ ಬಂದರೆ ನಿನ್ನ ತಾಕತ್ತು ತಿಳಿಯುತ್ತದೆ. ರಾಜಕೀಯ ಮರುಜನ್ಮ ಕೊಟ್ಟವರಿಗೆ ರಾಜಕೀಯ ಮರಣ ಶಾಸನ ಬರೆಯುವುದು ಗೊತ್ತಿದೆ ಅಂದಿದ್ದಾರೆ.
ಯತ್ನಾಳ್ ಮತ್ತು ನಿರಾಣಿಯ ವಾಕ್ಸಮರದ ಹಿಂದೆ ಕಾಣದ ಕೈಗಳು ಭಾರೀ ಕೆಲಸ ಮಾಡುತ್ತಿವೆ. ಇದರಲ್ಲಿ ಯತ್ನಾಳ್ ಮತ್ತು ಟೀಂ ಮೇಲುಗೈ ಸಾಧಿಸುತ್ತಾ ಅಥವಾ ನಿರಾಣಿ ಮತ್ತು ಟೀಂ ಮೇಲುಗೈ ಸಾಧಿಸುತ್ತಾ ಎಂಬುದು ಭಾರಿ ಕುತೂಹಲ ಮೂಡಿಸಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k