ವಾಷಿಂಗ್ಟನ್: ಟ್ವಿಟ್ಟರ್ ಎಡಪಂಥೀಯ ಚಿಂತನೆಗಳನ್ನು ಬೆಂಬಲಿಸುತ್ತದೆ ಎಂದು ಕಂಪನಿಯ ಹಿರಿಯ ಎಂಜಿನಿಯರ್ ಹೇಳಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮೆರಿಕದ ಬಲಪಂಥಿಯ ಸಂಘಟನೆ Project Veritas ಕುಟುಕು ಕಾರ್ಯಾಚರಣೆ ಮಾಡಿರುವ ವೀಡಿಯೋವನ್ನು ರಿಲೀಸ್ ಮಾಡಿದೆ. ಉದ್ಯೋಗಿ ಸಿರು ಮುರುಗೇಸನ್ ಕಂಪನಿ ಎಡಪಂಥೀಯ ಧೋರಣೆಯ ಬಗ್ಗೆ ಮಾತನಾಡಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ.
Advertisement
https://twitter.com/Timcast/status/1526336405663776768
Advertisement
ಟ್ವಿಟ್ಟರ್ ಬಲಪಂಥೀಯರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುತ್ತದೆ. ಎಡಪಂಥೀಯರ ಪರ ಬಗ್ಗೆ ಹೆಚ್ಚಿನ ಒಲವು ಹೊಂದಿದೆ ಎಂಬ ಆರೋಪ ಮೊದಲಿನಿಂದಲೂ ಬರುತ್ತಿತ್ತು. ಈಗ ಈ ವೀಡಿಯೋ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ #TwitterExposed ಟ್ರೆಂಡಿಂಗ್ ಟಾಪಿಕ್ ಆಗಿದೆ. ಇದನ್ನೂ ಓದಿ: ಭಾರತದಲ್ಲಿ ಟೆಸ್ಲಾ ಕಂಪನಿ ಇಲ್ಲ – ಇಂಡೋನೇಷ್ಯಾದಲ್ಲಿ ಮಸ್ಕ್ ಫೀಲ್ಡ್ ವಿಸಿಟ್
Advertisement
ವೀಡಿಯೋದಲ್ಲಿ ಏನಿದೆ?
ಟ್ವಿಟ್ಟರ್ ಎಡಪಂಥದ ಪರ ಹೆಚ್ಚಿನ ಒಲವು ಹೊಂದಿದೆ. ಟ್ವಿಟ್ಟರ್‌ಗೆ ಸೇರಿದ ಬಳಿಕ ಉದ್ಯೋಗಿಗಳು ತಮ್ಮ ಚಿಂತನೆಯನ್ನು ಬದಲಾಯಿಸಿ ಹೊಂದಿಕೊಳ್ಳುತ್ತರೆ. ಬಲಪಂಥೀಯ ವ್ಯಕ್ತಿಗಳನ್ನು ನಾವು ಸೆನ್ಸಾರ್ ಮಾಡುತ್ತೇವೆ.
Advertisement
ಮಸ್ಕ್ ಟ್ವಿಟ್ಟರ್ ಕಂಪನಿಯನ್ನು ಖರೀದಿಸದಂತೆ ಉದ್ಯೋಗಿಗಳು ತಡೆದಿದ್ದರು. ಮಸ್ಕ್ ಬಂಡವಾಳಶಾಹಿ ವ್ಯಕ್ತಿ. ನಾವು ನಿಜವಾಗಿಯೂ ಬಂಡವಾಳಶಾಹಿಗಳಂತೆ ಕೆಲಸ ಮಾಡುತ್ತಿಲ್ಲ. ನಾವು ಸಮಾಜವಾದಿಗಳು ಎಂದು ಸಿರು ಮುರುಗೇಸನ್ ಹೇಳಿದ್ದಾರೆ.
ಈ ವೀಡಿಯೋ ರಿಲೀಸ್ ಆದ ಬಳಿಕ ಟ್ವಿಟ್ಟರ್ ಕಂಪನಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.