ಚಿತ್ರದುರ್ಗ: ಪೋಕ್ಸೋ (POCSO) ಕೇಸಲ್ಲಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮುರುಘಾಶ್ರೀ (Muruga Shree) ತಮ್ಮ ಮಠದ (Muth) ಅಧಿಕಾರವನ್ನು ಮರಳಿ ಪಡೆದಿದ್ದಾರೆ.
ಪೋಕ್ಸೋ ಕೇಸಲ್ಲಿ 2022, ಸೆಪ್ಟೆಂಬರ್ 1ರಂದು ಮುರುಘಾಶ್ರೀ ಬಂಧನವಾಗಿತ್ತು. ಸತತ 14 ತಿಂಗಳು ಸೆರೆಮನೆ ವಾಸ ಅನುಭವಿಸಿದ್ದರು. ಈ ವೇಳೆ ರಾಜ್ಯ ಸರ್ಕಾರ ಮುರುಘಾಮಠದ ಆಡಳಿತ ನಿರ್ವಹಿಸಲು ನಿವೃತ್ತ ಐಎಎಸ್ ಅಧಿಕಾರಿ ವಸ್ತ್ರದ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿತ್ತು. ಇದನ್ನೂ ಓದಿ: ಆರ್‌ಎಸ್‌ಎಸ್‌ನಲ್ಲಿ ಜಾತಿ ಕೇಳಿ ಒಳಬಿಡುವ ಪದ್ಧತಿಯಿಲ್ಲ: ರಾಜಕುಮಾರ್
Advertisement
Advertisement
ಈ ನೇಮಕವನ್ನು ಪ್ರಶ್ನಿಸಿ ಮಠದ ಪರ ವಕೀಲರು ಹೈಕೋರ್ಟ್ ಮೊರೆಹೋಗಿದ್ದ ಹಿನ್ನೆಲೆ ಆಡಳಿತಾಧಿಕಾರಿ ನೇಮಕವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಆಗ ಮಠದ ಪೀಠಾಧಿಪತಿಯಾಗಿದ್ದ ಮುರುಘಾಶ್ರೀ ಜೈಲಲ್ಲಿದ್ದ ಕಾರಣ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ತಾತ್ಕಾಲಿಕವಾಗಿ ಮಠದ ಆಡಳಿತದ ಅಧಿಕಾರ ನೀಡಿತ್ತು. ಇದನ್ನೂ ಓದಿ: ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ತಿಂಗಳಲ್ಲಿ ಖಾತಾ: ಉದ್ಯಮಿಗಳ ನಿಯೋಗಕ್ಕೆ ಎಂ.ಬಿ.ಪಾಟೀಲ್ ಭರವಸೆ
Advertisement
ಹೀಗಾಗಿ ಈವರೆಗೆ ಚಿತ್ರದುರ್ಗ (Chitradurga) ಪಿಡಿಜೆ ಅವರು ಮಠದ ಆಡಳಿತಾಧಿಕಾರಿ ಆಗಿದ್ದರು. ಆದರೆ ನವೆಂಬರ್ 16ರಂದು ಮುರುಘಾಶ್ರೀ ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ ಮಠದ ಅಧಿಕಾರಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಅಧಿಕಾರ ಹಸ್ತಾಂತರಿಸುವಂತೆ ಚಿತ್ರದುರ್ಗದ ಪ್ರಿನ್ಸಿಪಲ್ ಡಿಸ್ಟ್ರಿಕ್ಟ್ ಮತ್ತು ಸೆಷನ್ಸ್ ಜಡ್ಜ್‌ಗೆ ಸೂಚಿಸಿದೆ. ಇದನ್ನೂ ಓದಿ: ಅಂಬಾರಿ ಆನೆ ಅರ್ಜುನನ ಸಮಾಧಿಗೆ ರಾಜವಂಶಸ್ಥ ಯದುವೀರ್ ಪೂಜೆ
Advertisement
ಮುರುಘಾಶ್ರೀಗೆ ಮಠದ ಆಡಳಿತಾಧಿಕಾರವನ್ನು ನ್ಯಾಯಾಧೀಶರು ಮರಳಿ ಹಸ್ತಾಂತರಿಸಿದ್ದಾರೆ. ಈ ಕುರಿತ ಪತ್ರಿಕಾ ಹೇಳಿಕೆಯನ್ನು ಮುರುಘಾ ಮಠ ಇಂದು ಬಿಡುಗಡೆ ಮಾಡಿದೆ. ಅಲ್ಲದೇ ಮುರುಘಾಶ್ರೀಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆ ಪ್ರವೇಶಿಸದೇ ಜಿಲ್ಲೆಯಿಂದ ಹೊರಗಿದ್ದುಕೊಂಡೇ ಮಠದ ಆಡಳಿತ ನಡೆಸಲಿದ್ದಾರೆ ಎಂದು ಮಠದ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮುರುಡೇಶ್ವರದ ರಂಗು ಹೆಚ್ಚಿಸಿದ ರಾಜ್ಯದ ಅತೀ ದೊಡ್ಡ ಫ್ಲೋಟಿಂಗ್ ಬ್ರಿಡ್ಜ್