ಜೈಲಿನಲ್ಲಿ ರಾತ್ರಿ ಕಳೆದ ಮುರುಘಾ ಶ್ರೀಗಳು

Published by
Public TV
Advertisements

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೊ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳು ರಾತ್ರಿಯಿಡೀ ನಿದ್ರೆ ಇಲ್ಲದೇ ಜೈಲಿನಲ್ಲಿ ಕಳೆದರು.

Advertisements

ಗುರುವಾರ ರಾತ್ರಿ ಶ್ರೀಗಳು ನ್ಯಾಯಾಂಗ ಬಂಧನಕ್ಕೊಳಗಾದರು. ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆ ತಡರಾತ್ರಿ ಜೈಲಿಗೆ ಸೇರಿದರು. ಇದೀಗ ತಡರಾತ್ರಿಯಿಂದ ಜೈಲಿನಲ್ಲಿರುವ ಶ್ರೀಗಳು ರಾತ್ರಿಯಿಡೀ ನಿದ್ದೆ ಇಲ್ಲದೇ, ಚಿಂತಾಕ್ರಾಂತರಾಗಿದ್ದರು. ಬೆಳಗ್ಗೆಯಾದ ಕೂಡಲೇ ವಿಶ್ರಾಂತಿ ಮುಗಿಸಿ ಎದ್ದು, ನಂತರ ಧ್ಯಾನದಲ್ಲಿ ಸ್ವಾಮೀಜಿ ನಿರತರಾಗಿದ್ದರು. ಬಳಿಕ ಇತರ ಕೈದಿಗಳಿಗೆ ನೀಡುವಂತೆ ಜೈಲು ಸಿಬ್ಬಂದಿ ಶ್ರೀಗಳಿಗೂ ಸಹ ಚಹಾ ನೀಡಿದರು. ಇದನ್ನೂ ಓದಿ: ಮುರುಘಾಶ್ರೀ ಪೋಕ್ಸೊ ಪ್ರಕರಣದಲ್ಲಿ ಸರ್ಕಾರ ಎಂಟ್ರಿ ಕೊಡಲ್ಲ: ಆರ್.ಅಶೋಕ್

Advertisements

ತಡರಾತ್ರಿ 2:50ರ ಸುಮಾರಿಗೆ ಬಂಧಿತರಾದ ಶ್ರೀಗಳು ಬೆಳಗ್ಗೆ 6 ಗಂಟೆಗೆ ಎದ್ದರು. ನಂತರ ಮುರುಘಾಶ್ರೀಗೆ ಮೆಡಿಸಿನ್ ಮತ್ತು ಟೂತ್ ಪೇಸ್ಟ್, ಬ್ರಶ್ ಅನ್ನು ವಕೀಲರು ನೀಡಿ ಬಂದರು. ಈ ಹಿಂದೆ ಕಾರಾಗೃಹದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದ ಮುರುಘಾಶ್ರೀ ಮಧ್ಯರಾತ್ರಿಯೇ ಬಂಧಿಯಾಗಿರುವ ವಿಚಾರ ತಿಳಿದು ಕಾರಾಗೃಹ ಸಿಬ್ಬಂದಿಯೇ ಶಾಕ್ ಆಗಿದ್ದಾರೆ. ಇದನ್ನೂ ಓದಿ: ಪೋಕ್ಸೊ ಪ್ರಕರಣ – ಮುರುಘಾ ಶ್ರೀಗೆ 14 ದಿನ ನ್ಯಾಯಾಂಗ ಬಂಧನ

Advertisements

ನ್ಯಾಯಾಂಗ ಬಂಧನ
ಗುರುವಾರ ತಡರಾತ್ರಿ ಮಠದಿಂದ ಕಾವಿ ಕಳಚಿ ಬಿಳಿ ವಸ್ತ್ರ ಧರಿಸಿ ಶ್ರೀಗಳು ಹೊರಬಂದಿದ್ದರು. ನಂತರ ಅವರನ್ನು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ನಸುಕಿನ 2.25ಕ್ಕೆ ಆಸ್ಪತ್ರೆಯಿಂದ ಹೊರಟ ಪೊಲೀಸರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕೋಮಲಾ ಅವರ ಮುಂದೆ ಹಾಜರುಪಡಿಸಿದರು. ಶರಣರ ಪರ ಜಾಮೀನು ಕೋರಿ ಸ್ಥಳದಲ್ಲೇ ಅರ್ಜಿ ಸಲ್ಲಿಸಿದರು. ಅರ್ಜಿ ತಿರಸ್ಕರಿಸಿದ ನ್ಯಾಯಾಧೀಶರು ಶುಕ್ರವಾರ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಸೂಚಿಸಿ, ಶ್ರೀಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

Live Tv

Advertisements