ChitradurgaDistrictsKarnatakaLatestLeading NewsMain Post

ಮುರುಘಾ ಶ್ರೀಗಳಿಗೆ ಎದೆ ನೋವು – ಆಸ್ಪತ್ರೆಗೆ ದಾಖಲು

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೋ ಪ್ರಕರಣದಡಿ ಬಧನಕ್ಕೊಳಗಾಗಿರುವ ಮುರುಘಾ ಶ್ರೀಗಳಿಗೆ ಎದೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುರುಘಾ ಶ್ರೀಗಳಿಗೆ ಬಿಪಿ ಹಾಗೂ ಸ್ಯಾಚುರೇಷನ್ ವ್ಯತ್ಯಾಸವಾಗಿರುವುದಾಗಿ ವರದಿಯಾಗಿದ್ದು, ವೈದ್ಯರು ಮೇಲಿಂದ ಮೇಲೆ ಇಸಿಜಿ ಹಾಗೂ ಎಕೋ ಪರೀಕ್ಷೆ ನಡೆಸುತ್ತಿದ್ದಾರೆ. ಅವರಿಗೆ ಎದೆ ನೋವು ಕಂಡುಬಂದಿರುವ ಹಿನ್ನೆಲೆ ಜಿಲ್ಲಾಆಸ್ಪತ್ರೆಯತ್ತ ಜನರ ದಂಡು ಹರಿದಿದೆ. ತಂಡೋಪತಂಡವಾಗಿ ಹರಿದು ಬರುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಆಸ್ಪತ್ರೆಯೆಡೆಗೆ ಭಕ್ತಾದಿಗಳ ದಂಡು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಮುರುಘಾ ಶರಣರ ಬಂಧನ- ಬಿಕೋ ಎನ್ನುತ್ತಿದೆ ಮಠದ ಆವರಣ

ವೈದ್ಯರು ಈ ಮೊದಲೇ ಮುರುಘಾ ಶ್ರೀಗಳಿಗೆ ಎದೆನೋವು ಬಂದರೆ ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡಿದ್ದರು. ಇಂದು ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಪೊಲೀಸರು ಮುರುಘಾ ಶ್ರೀ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಪೋಕ್ಸೊ ಪ್ರಕರಣ – ಮುರುಘಾ ಶ್ರೀಗೆ 14 ದಿನ ನ್ಯಾಯಾಂಗ ಬಂಧನ

ಶ್ರೀಗಳಿಗೆ ಎಮ್‌ಆರ್‌ಐ ಸ್ಕ್ಯಾನ್ ಪರೀಕ್ಷೆ ಪೂರ್ಣಗೊಂಡಿದ್ದು, ಇದೀಗ ವೈದ್ಯರ ತಂಡ  ಅವರನ್ನು ವ್ಹೀಲ್ ಚೇರ್ ನಲ್ಲಿ ಸಿಟಿ ಸ್ಕ್ಯಾನ್ ಗೆ ಕರೆದೊಯದದಿರುವುದಾಗಿ ವರದಿಯಾಗಿದೆ. ಮುರುಘಾ ಶ್ರೀ ಗಳಿಗೆ ಉಸಿರಾಟದ ತೊಂದರೆಯೂ ಕಂಡುಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆಗಳಿವೆ.

Live Tv

Leave a Reply

Your email address will not be published.

Back to top button