ಕೋಲ್ಕತ್ತಾ: ವಾಮಾಚಾರದ ಶಂಕೆಯಿಂದ ಗ್ರಾಮಸ್ಥರೆಲ್ಲರೂ ಸೇರಿ ವೃದ್ಧರೊಬ್ಬರಿಗೆ ಬಲವಂತವಾಗಿ ಮೂತ್ರ ಕುಡಿಸಿ, ಮಲ ತಿನ್ನಿಸಿ ವಿಕೃತಿ ಮೆರೆದಿದ್ದಾರೆ. ಈ ಅವಮಾನ ತಾಳಲಾರದೆ ವೃದ್ಧ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‍ನ ಮಥುರಾಪುರ ಗ್ರಾಮದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ರಘುನಾಥಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಾಣಿಕ್ ಸರ್ದಾರ್ (68) ಆತ್ಮಹತ್ಯೆ ಮಾಡಿಕೊಂಡ ವೃದ್ಧ.
ತನ್ನ ಮೊಮ್ಮಗಳು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಮಾಣಿಕ್ ಸರ್ದಾರ್ ಆಕೆಯನ್ನು ನಗರದ ಓಜಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ನಿನ್ನೆ ಮೃತಪಟ್ಟಿದ್ದಾಳೆ. ಆದರೆ ನೆರೆಯವರು ಮಾಣಿಕ್ ಸರ್ದಾರ್ ನಾಲ್ವರೊಂದಿಗೆ ಸೇರಿ ವಾಮಾಚಾರ ಮಾಡಿದ್ದಾರೆ ಅಂದುಕೊಂಡಿದ್ದಾರೆ. ವಾಮಾಚಾರ ಮಾಡಿದ್ದೇ ಬಾಲಕಿ ಸಾವಿಗೆ ಕಾರಣವೆಂದು ತಿಳಿದಿದ್ದಾರೆ. ಇದನ್ನೂ ಓದಿ: ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್‍ಸಿಯಲ್ಲಿ ಟಾಪರ್
ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಮಾಣಿಕ್ ಸರ್ದಾರ್ ನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಲವಂತವಾಗಿ ಮೂತ್ರ ಕುಡಿಸಿ, ಮಲ ತಿನ್ನಿಸಿದ್ದಾರೆ. ಇದರಿಂದ ಮನನೊಂದ ವೃದ್ಧ ಅವಮಾನ ತಾಳಲಾರದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಹೋದರಿಯ ಸ್ನೇಹಿತೆಯನ್ನೇ ಗರ್ಭಿಣಿ ಮಾಡಿ, ಗರ್ಭಪಾತವನ್ನೂ ಮಾಡಿಸಿದ!
ಸ್ಥಳಕ್ಕೆ ಭೇಟಿ ನೀಡಿದ ರಘುನಾಥಗಂಜ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.