ಟೆಲ್ ಅವೀವ್: ಹಮಾಸ್ ಉಗ್ರರ (Hamas) ದಾಳಿಗೆ ಕ್ರೂರವಾಗಿ ಸಾವಿಗೀಡಾದ ಮಕ್ಕಳ ಚಿತ್ರಗಳನ್ನು ಇಸ್ರೇಲ್ (Israel) ಪ್ರಧಾನಿ ಕಚೇರಿ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಅಲ್ಲದೇ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರಿಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಈ ಚಿತ್ರಗಳನ್ನು ತೋರಿಸಿ ಭೀಕರತೆಯನ್ನು ಹೇಳಿಕೊಂಡಿದ್ದಾರೆ.
Hamas brought ISIS flags to massacre Israeli children, women and men.
Hamas is a genocidal terrorist organization.
Hamas is worse than ISIS pic.twitter.com/j3BagCudor
— Israel Defense Forces (@IDF) October 12, 2023
Advertisement
ಈ ಚಿತ್ರಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಇಸ್ರೇಲ್ ಪ್ರಧಾನಿ ಕಚೇರಿ, ಎಚ್ಚರಿಕೆ, ಇವು ಹಮಾಸ್ ರಾಕ್ಷಸರಿಂದ ಕೊಲ್ಲಲ್ಪಟ್ಟ ಮತ್ತು ಸುಟ್ಟುಹೋದ ಶಿಶುಗಳ ಭಯಾನಕ ಫೋಟೋಗಳಾಗಿವೆ. ಹಮಾಸ್ ಅಮಾನವೀಯವಾಗಿದೆ. ಹಮಾಸ್ ಐಸಿಸ್ ಆಗಿದೆ ಎಂದು ಬರೆದುಕೊಂಡಿದೆ. ಇದನ್ನೂ ಓದಿ: ಗಾಜಾ ಮೇಲೆ ಅಣ್ವಸ್ತ್ರ ಪ್ರಯೋಗವಾಗಬೇಕು ಎಂದ ಇಸ್ರೇಲ್ ಸಂಸದೆ – ಅಮೆರಿಕಕ್ಕೆ ಟರ್ಕಿ ಎಚ್ಚರಿಕೆ: 3ನೇ ಮಹಾಯುದ್ಧ ನಡೆಯುತ್ತಾ?
Advertisement
Advertisement
ಈ ಯುದ್ಧದಲ್ಲಿ ನಡೆಯುತ್ತಿರುವ ಹಿಂಸಾಚಾರ, ರಕ್ತಪಾತ ಇಸ್ರೇಲ್ ಜನರ ಮೇಲೆ ಮಾತ್ರವಲ್ಲ. ಮಕ್ಕಳ ಮೇಲೆ ಮತ್ತು ಮಹಿಳೆಯರ ಮೇಲೂ ನಡೆಯುತ್ತಿದೆ. ಸುಮಾರು 40 ಮಕ್ಕಳನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಹಲವಾರು ಮಹಿಳೆಯರ ಮೇಲೆ ಉಗ್ರರು ಅತ್ಯಾಚಾರ ಎಸಗುತ್ತಿದ್ದಾರೆ ಎಂದು ವರದಿಯಾಗಿದೆ.
Advertisement
ಇಸ್ರೇಲ್-ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಯುದ್ಧ ಮುಂದುವರೆದಿದ್ದು ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಹಮಾಸ್ ಉಗ್ರರ ಕಪಿಮುಷ್ಠಿಯಲ್ಲಿರೋ ನೋವಾಗೆ 26ನೇ ವರ್ಷದ ಹುಟ್ಟುಹಬ್ಬ- ತಾಯಿ ಹೇಳಿದ್ದೇನು?
Web Stories