ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಕಳೆದ ವರ್ಷ ಕೋಮು ಗಲಭೆಗೆ ಕಾರಣವಾಗಿದ್ದ ಎಸ್‍ಡಿಪಿಐ ಮುಖಂಡ ಅಶ್ರಫ್ ಕೊಲೆ ಪ್ರಕರಣದ ಆರೋಪಿಗೆ ಈಗ ಕೊಲೆ ಬೆದರಿಕೆ ಶುರುವಾಗಿದೆ.
ಕಳೆದ 16 ತಿಂಗಳಿಂದ ಜಾಮೀನು ಸಿಗದೆ ಜೈಲಿನಲ್ಲಿದ್ದ ಆರೋಪಿ ಕೆಲ ದಿನದ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ. ಬಜರಂಗದಳ ಕಾರ್ಯಕರ್ತ ಭರತ್ ಕುಮ್ಡೇಲು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಕೊಲೆ ಬೆದರಿಕೆ ಹಾಕಲಾಗಿದೆ. ಮಂಗಳೂರು ಮುಸ್ಲಿಮ್ಸ್ ಎನ್ನುವ ಫೇಸ್ಬುಕ್ ಪೇಜಿನಲ್ಲಿ ಈ ಕೊಲೆ ಬೆದರಿಕೆ ಹಾಕಲಾಗಿದ್ದು, ಸೋದರನ ಕೊಲೆಗೆ ಪ್ರತೀಕಾರ ತೀರಿಸುತ್ತೇವೆ. ನಿನ್ನ ಕೌಂಟ್ ಡೌನ್ ಶುರುವಾಗಿದೆ. ಶೀಘ್ರದಲ್ಲೇ ನಿನಗೆ ಚಟ್ಟ ಕಟ್ಟಲಾಗುತ್ತದೆ ಅಂತ ಬೆದರಿಕೆ ಹಾಕಲಾಗಿದೆ.
Advertisement
Advertisement
2017 ಜೂನ್ 21ರಂದು ಬಂಟ್ವಾಳದ ಬೆಂಜನಪದವಿನಲ್ಲಿ ಅಶ್ರಫ್ ಹತ್ಯೆಯಾಗಿತ್ತು. ಬಳಿಕ ಪೊಲೀಸರು ಭರತ್ ಸೇರಿ 8 ಆರೋಪಿಗಳನ್ನು ಬಂಧಿಸಿದ್ದರು. 2 ದಿನಗಳ ಹಿಂದೆ ಭರತ್‍ಗೆ ಜಾಮೀನು ದೊರಕಿದ್ದು ವಿರೋಧಿಗಳು ಕಿಡಿಕಾರುವಂತಾಗಿದೆ. ಭಾರೀ ಕೋಮು ದ್ವೇಷಕ್ಕೆ ಕಾರಣವಾಗಿದ್ದ ಅಶ್ರಫ್ ಕೊಲೆ ಪ್ರಕರಣ ಬಳಿಕ ರಿವೇಂಜ್ ಆಗಿ ಆರ್‍ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳನ ಕೊಲೆಯೊಂದಿಗೆ ತೀವ್ರ ಸಂಘರ್ಷಕ್ಕೆ ಗುರಿಯಾಗಿತ್ತು. ಇದೀಗ ಮತ್ತೆ ದ್ವೇಷದ ಕಿಡಿ ಹತ್ತಿಕೊಳ್ಳುತ್ತಾ ಅನ್ನುವ ಶಂಕೆ ಮೂಡುವಂತಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv