ಆಸ್ತಿಗಾಗಿ ಸೋದರನನ್ನೇ ಕೊಂದಿದ್ದ ತಮ್ಮನ ಸೆರೆ

Public TV
1 Min Read
ARREST 2

ಬೆಂಗಳೂರು: ಆಸ್ತಿ ಕೊಡದ ಸಹೋದರನ್ನು ಕೊಲೆಗೈದು ತಲೆ ಮರೆಸಿಕೊಂಡಿದ್ದ ತಮ್ಮ ಹಾಗೂ ಆತನ ಸ್ನೇಹಿತನನ್ನು ಬಂಧಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಗೋವರ್ಧನ್ ಹಾಗೂ ವಿನೋದ್ ಎಂದು ಗುರುತಿಸಲಾಗಿದ್ದು, ಕಳೆದ ತಿಂಗಳು ಆನೇಕಲ್ ಬಸ್ ಡಿಪೋ ಹಿಂಬಾಗ ಆನೇಕಲ್ ನಿವಾಸಿ ಪದ್ಮನಾಬ್ ಎಂಬವರ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

vlcsnap 2019 06 10 19h55m08s54

ಈ ಪ್ರಕರಣ ದಾಖಲಿಸಿಕೊಂಡ ಆನೇಕಲ್ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಕೊಲೆಯಾದ ಪದ್ಮನಾಬ್  ನನ್ನು ಮಲ ಸಹೋದರನೇ ಆಸ್ತಿಗಾಗಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಪೊಲೀಸರು ತಲೆಮರೆಸಿಕೊಂಡಿದ್ದ ಗೋವರ್ಧನ್ ಹಾಗೂ ವಿನೋದ್ ನನ್ನು ಬಂಧಿಸಿದ್ದಾರೆ.

ಗೋವರ್ಧನ್ ತಂದೆಗೆ ಇಬ್ಬರು ಹೆಂಡತಿಯರಿದ್ದು, ತಂದೆ ಧರ್ಮರಾಜ್ ಎರಡನೇ ಪತ್ನಿ ಮತ್ತು ಮಗ ಗೋವರ್ಧನನಿಗೆ ಹಿಂಸೆ ನೀಡುತ್ತಿದ್ದನು. ಅಲ್ಲದೆ ಆಸ್ತಿಯನ್ನು ಕೊಡದೆ ಸತಾಯಿಸುತ್ತಿದ್ದನು. ಈ ಹಿನ್ನೆಲೆ ಗೋವರ್ಧನ್ ತನ್ನ ಸ್ನೇಹಿತ ವಿನೋದ್ ಸೇರಿ ಪದ್ಮನಾಬ್‍ನಿಗೆ ಮದ್ಯಪಾನ ಮಾಡಿಸಿ ತಲೆ ಮೇಲೆ ಸಿಮೆಂಟ್ ಬ್ಲಾಕ್ ಹಾಕಿ ಕೊಲೆ ಮಾಡಿದ್ದನು.

ಈ ಕುರಿತು ಅನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರ ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *