ಕಲಬುರಗಿ: ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಚಾಲಕನ (Driver) ಬರ್ಬರ ಹತ್ಯೆಗೈದ (Murder) ಘಟನೆ ಕಲಬುರಗಿ (Kalaburagi) ನಗರದ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಡಿಪೋ ನಂಬರ್ 3ರ ಚಾಲಕ ನಾಗಯ್ಯ ಸ್ವಾಮಿ (45) ಹತ್ಯೆಯಾದ ವ್ಯಕ್ತಿ. ಬಸ್ ನಿಲ್ದಾಣದಲ್ಲಿ ಬಸ್ ತಂದು ನಿಲ್ಲಿಸಿದ ವೇಳೆ ಘಟನೆ ನಡೆದಿದ್ದು, 3 ಜನ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ನೂರಾರು ಜನರ ಮುಂದೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು, ಹಳೇ ವೈಷಮ್ಯ ಹಿನ್ನೆಲೆ ಈ ಕೃತ್ಯ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ:ಇಂಡ್ಲವಾಡಿಯಲ್ಲಿ ಭೀಕರ ಅಪಘಾತ – ಬೈಕ್ ಮೇಲೆಯೇ ಹರಿದ ಟಿಪ್ಪರ್ ಲಾರಿ
ಘಟನಾ ಸ್ಥಳಕ್ಕೆ ಬ್ರಹ್ಮಪುರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ – ಮಿಥುನ್ ರೈ ಕಾರ್ ಮೇಲೆ ಕಲ್ಲು ತೂರಾಟ