ಧಾರವಾಡ: ಆಸ್ತಿ ವಿಚಾರಕ್ಕಾಗಿ ವ್ಯಕ್ತಿಯೋರ್ವನನ್ನು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder) ಮಾಡಿದ ಘಟನೆ ನಗರದ (Dharwad) ಕೊಪ್ಪದಕೇರಿ ಶಿವಾಲಯದ ಬಳಿ ನಡೆದಿದೆ.
ಹೆಬ್ಬಳ್ಳಿ ಗ್ರಾಮದ ನಿಂಗಪ್ಪ ಹಡಪದ (60) ಹತ್ಯೆಗೀಡಾದ ವ್ಯಕ್ತಿ. ಜನದಟ್ಟಣೆ ಇರುವ ಜಾಗದಲ್ಲೇ ಈ ಕೃತ್ಯ ನಡೆದಿದ್ದು, ಆಸ್ತಿ ವಿಚಾರಕ್ಕೆ ಸಂಬಂಧಿಕರೆ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ವೃದ್ಧನ ಹತ್ಯೆಗೈಯುತ್ತಿರುವ ದೃಶ್ಯವನ್ನು ಅಲ್ಲೇ ಇದ್ದ ಯುವಕನೊಬ್ಬ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ. ಇದನ್ನೂ ಓದಿ: ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಎಫ್‍ಐಆರ್
ಕೊಲೆ ಮಾಡುತ್ತಿರುವ ಮೊಬೈಲ್ ವೀಡಿಯೋ ಪೊಲೀಸರಿಗೆ (Police) ಸಿಕ್ಕಿದ್ದು, ಮೂರು ಅರೋಪಿಗಳು ಕೊಲೆಯಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಆರೋಪಿಗಳನ್ನು ಬಂಧಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ ನಕಲಿ ನೋಟ್ ಹಾವಳಿ ಪ್ರಕರಣ – ಬಳ್ಳಾರಿ ಯುವಕನ ಬಂಧಿಸಿದ ಎನ್‍ಐಎ