Hubballi: ದುಷ್ಕರ್ಮಿಗಳಿಂದ ವೈಷ್ಣವಿ ದೇವಸ್ಥಾನದ ಅರ್ಚಕನ ಕೊಲೆ – ಬೆಚ್ಚಿಬಿದ್ದ ಜನತೆ

Public TV
1 Min Read
Hubballi

ಹುಬ್ಬಳ್ಳಿ: ಇಲ್ಲಿನ ಈಶ್ವರ ನಗರದಲ್ಲಿರುವ ವೈಷ್ಣವಿ ದೇವಸ್ಥಾನದ‌ ಅರ್ಚಕರೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಭಾನುವಾರ ನಡೆದಿದೆ. ಘಟನೆಯಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಇದನ್ನೂ ಓದಿ: Paris Olympic 2024: ಭಾರತೀಯ ಕ್ರೀಡಾಪಟುಗಳಿಗೆ 8.5 ಕೋಟಿ ನೆರವು ಘೋಷಿಸಿದ ಬಿಸಿಸಿಐ

Hubballi 2

ವೈಷ್ಣವಿ ದೇವಸ್ಥಾನದ ಪೂಜಾರಿ ದೇವಪ್ಪಜ್ಜ ಕೊಲೆಯಾದ ಅರ್ಚಕ. ದುಷ್ಕರ್ಮಿಗಳು ಚಾಕುವಿನಿಂದ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪರಶುರಾಮ ಥೀಮ್ ಪಾರ್ಕ್‍ಗೆ 11 ಕೋಟಿ ಅನುದಾನ ಬಿಡುಗಡೆಯಾಗಿಲ್ಲ, ಅವ್ಯವಹಾರ ಹೇಗಾಗುತ್ತೆ? – ಸುನಿಲ್ ಕುಮಾರ್

ಕಳೆದ ಒಂದು ವರ್ಷದ ಹಿಂದೆ ಅರ್ಚಕನ  ಮೇಲೆ ದುಷ್ಕರ್ಮಿಗಳಿಂದ ದಾಳಿ ನಡೆದಿತ್ತು. ಅದೃಷ್ಟವಶಾತ್‌ ಆ ಸಮಯದಲ್ಲಿ ಅರ್ಚಕ ಬದುಕುಳಿದಿದ್ದರು ಎನ್ನಲಾಗಿದೆ. ಇಲ್ಲಿನ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಈಗಾಗಲೇ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: Rain Alert: ಉಡುಪಿಯ ಬ್ರಹ್ಮಾವರದಲ್ಲಿ ಕೃಷಿ ಭೂಮಿ ಜಲಾವೃತ – ಚಿಕ್ಕಮಗಳೂರು, ದಾವಣಗೆರೆ, ಕೊಪ್ಪಳದಲ್ಲೂ ಹೆಚ್ಚಿದ ಭೀತಿ

Share This Article