ಬಾಲಿವುಡ್ ಹಾಟ್ ಬ್ಯೂಟಿ ಮಲ್ಲಿಕಾ ಶೆರಾವತ್ (Mallika Sherawat) ಮತ್ತೆ ಸುದ್ದಿಯಲ್ಲಿದ್ದಾರೆ. ಮುನಿಸು ಮರೆತು 20 ವರ್ಷಗಳ ನಂತರ ಇಮ್ರಾನ್ ಹಶ್ಮಿ (Emraan Hashmi) ಮತ್ತು ಮಲ್ಲಿಕಾ ಶೆರಾವತ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಜೊತೆಯಾಗಿ ಕ್ಯಾಮೆರಾಗೆ ಪೋಸ್ ಕೊಡುವ ಮೂಲಕ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದಾರೆ.
ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ಇಡೀ ಹಿಂದಿ ಸೆಲೆಬ್ರೆಟಿಗಳ ದಂಡೇ ಹಾಜರಿ ಹಾಕಿತ್ತು. ಈ ವೇಳೆ, ಅನಿರೀಕ್ಷಿತವಾಗಿ ಈ ಕಾರ್ಯಕ್ರಮಲ್ಲಿ ಇಮ್ರಾನ್ ಮತ್ತು ಮಲ್ಲಿಕಾ ಭೇಟಿಯಾಗಿದ್ದಾರೆ. ಮುನಿಸೆಲ್ಲಾ ಮರೆತು ಇಬ್ಬರೂ ಖುಷಿ ಖುಷಿಯಾಗಿ ಮಾತನಾಡಿದ್ದಾರೆ. ಬಳಿಕ ಕ್ಯಾಮೆರಾಗೆ ಪೋಸ್ ಕೊಡುವ ಮೂಲಕ ಸಂಭ್ರಮಿಸಿದ್ದಾರೆ.
20 ವರ್ಷಗಳ ಹಿಂದೆ ಸಿನಿಮಾವೊಂದರ ವಿಚಾರವಾಗಿ ಮನಸ್ತಾಪವಾಗಿತ್ತು. ಹಾಗಾಗಿ ಮಾತು ಬಿಟ್ಟಿದ್ದರು. ಈಗ ಸಮಯ ಬದಲಾಗಿದೆ. ಇಬ್ಬರ ನಡುವೆ ಅದೇನೇ ಆಗಿರಲಿ ಎಲ್ಲಾ ಮರೆತು ಖುಷಿಯಾಗಿರೋದನ್ನ ನೋಡಿ ಅಭಿಮಾನಿಗಳು ಭೇಷ್ ಎಂದಿದ್ದಾರೆ. ಮತ್ತೆ ಮುಂದೆ ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲಿ ಎಂದು ಆಶಿಸಿದ್ದಾರೆ. ಇದನ್ನೂ ಓದಿ:ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ‘ವೀರಕನ್ನಡಿಗ’ ನಟ ಸಯಾಜಿ ಶಿಂಧೆ
ಮಲ್ಲಿಕಾ (Mallika Sherawat) ಮತ್ತು ಇಮ್ರಾನ್ ಜೋಡಿಯಾಗಿ ಮರ್ಡರ್, ಮರ್ಡರ್ ಚಿತ್ರದ ಸೀಕ್ವೆಲ್, ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.