-ಕೊಲೆ ಬಳಿಕ ಶವವನ್ನು ಕೃಷ್ಣಾ ನದಿಗೆ ಬೀಸಾಕಿ ಪರಾರಿಯಾಗಿದ್ದ ಗ್ಯಾಂಗ್
ಕಲಬುರಗಿ: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್‌ನಂತೆ ಜಿಲ್ಲೆಯಲ್ಲೊಂದು ಪ್ರಕರಣ ಬೆಳಕಿಗೆ ಬಂದಿದೆ. ಸೆಕ್ಸ್‌ಗಾಗಿ ನಿರಂತರ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಲಿವ್ ಇನ್‌ನಲ್ಲಿದ್ದ ಪ್ರೇಮಿಗಳು ಹಾಗೂ ಸ್ನೇಹಿತರು ಸೇರಿ ಕೊಲೆ ಮಾಡಿದ್ದು, ಸದ್ಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ನಗರದ ರಾಘವೇಂದ್ರ ನಾಯಕ (69) ಮೃತ ವ್ಯಕ್ತಿ. ಗುರುರಾಜ್ ಹಾಗೂ ಅಶ್ವಿನಿ ಇಬ್ಬರು ಲಿವ್ ಇನ್ ಟುಗೇದರ್‌ನಲ್ಲಿದ್ದರು. ಈ ವೇಳೆ ಮೃತ ರಾಘವೇಂದ್ರ ಅಶ್ವಿನಿ ಮೊಬೈಲ್‌ಗೆ ಮಂಚಕ್ಕೆ ಬರುವಂತೆ ಕರೆದು ನಿರಂತರ ಕಿರುಕುಳ ನೀಡುತ್ತಿದ್ದ. ಹೀಗಾಗಿ, ಈ ವಿಷಯವನ್ನು ಅಶ್ವಿನಿ ತನ್ನ ಪ್ರಿಯಕರ ಗುರುರಾಜ್‌ಗೆ ತಿಳಿಸಿದ್ದಳು. ಬಳಿಕ ಗುರುರಾಜ್ ತನ್ನ ಸ್ನೇಹಿತ ಲಕ್ಷ್ಮಿಕಾಂತ್‌ನಿಗೆ ತಿಳಿಸಿ, ಕೊಲೆಗೆ ಸಂಚು ಹಾಕಿದ್ದರು.ಇದನ್ನೂ ಓದಿ: ಡೆವಿಲ್‌ಗೆ ಯುದ್ಧಾತಂಕ – ವಿದೇಶಿ ಪ್ರವಾಸ ಮರುನಿಗದಿ ಕೋರಿ ದರ್ಶನ್ ಅರ್ಜಿ
ಮಾ.12ರಂದು ಅಶ್ವಿನಿ ರಾಘವೇಂದ್ರನಿಗೆ ಕರೆ ಮಾಡಿ, ಭೇಟಿಯಾಗೋಕೆ ತಿಳಿಸಿದ್ದಳು. ಬಳಿಕ ಮೂವರು ಸೇರಿ ಆತನನ್ನು ಕಿಡ್ನ್ಯಾಪ್ ಮಾಡಿ, ಕೀರ್ತಿ ನಗರದ ಸ್ಮಶಾನ ಭೂಮಿಗೆ ಕರೆದೊಯ್ದು ಖಾಸಗಿ ಅಂಗಕ್ಕೆ ಹಲ್ಲೆ ಮಾಡಿ, ಬರ್ಬರವಾಗಿ ಕೊಲೆ ಮಾಡಿದ್ದರು. ಬಳಿಕ ಆತನ ಶವವನ್ನು ರಾಯಚೂರಿನ (Raichuru) ಶಕ್ತಿನಗರ ಕೃಷ್ಣಾ ನದಿಯಲ್ಲಿ (Krishna River) ಬಿಸಾಕಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಸ್ಟೇಷನ್ ಬಜಾರ್ (Station Bazaar) ಪೊಲೀಸರು ತನಿಖೆ ನಡೆಸಿದ್ದರು. ಸದ್ಯ ಪ್ರಕರಣವನ್ನು ಬೇಧಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಬಿಹಾರ ಮತದಾರರ ಪಟ್ಟಿ ನವೀಕರಣ: ಜುಲೈ 10 ರಂದು ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ